Duryodhana Vilapa Summary in Kannada

Duryodhana Vilapa is a Kannada poem written by Ranna in the 10th century. It is a part of the Shabdamanidarpana, a collection of poems on various topics. The poem describes the lamentation of Duryodhana, the antagonist of the Mahabharata, on his deathbed.

Duryodhana Vilapa Summary in Kannada

ಪದ್ಯಗಳ ಸಾರಾಂಶ/ವಿಮರ್ಶೆ:

ದುರ್ಯೋಧನನು ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದುಕೊಂಡ ನಂತರವೂ ಯುದ್ಧವನ್ನು ಮುಂದುವರೆಸಿ, ತನ್ನ ಸೇಡನ್ನು ಪೂರೈಸಿಕೊಳ್ಳುವ ಸಲುವಾಗಿ ಯುದ್ಧೋತ್ಸಾಹವನ್ನು ಉಳಿಸಿಕೊಂಡಿದ್ದನು. ಯುದ್ಧದಲ್ಲಿ ತನ್ನ ಮುಂದಿನ ನಡೆ ಹೇಗೆಂಬುದನ್ನು ಶರಶಯ್ಕೆಯಲ್ಲಿ ಮಲಗಿದ್‌ದ ಭೀಷ್ಮಾಚಾರರೊಡನೆ ಸಮಾಲೋಚಿಸಿ ತೀರ್ಮಾನಿಸಲು ಅವರಿದ್ದಲ್ಲಿಗೆ ಹೊರಡು ತಾನೆ. ಆಗ ರಣರಂಗದಲ್ಲಿ ಹೋರಾಡಿ ಮಡಿದ ಬಂಧುಮಿತ್ರರ ಶವಗಳನ್ನು ಕಂಡಾಗ ಅವನ ದುಃಖ ಮಡುಗಟ್ಟಿ ನಿಲ್ಲುವುದನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.

೧) ಉಡಿದಿರ್ದ ಕಯ್ದು ನೆತ್ತರ
ಕಡಲೊಳಗಡಿಗಡಿಗೆ ತಳಮನುರ್ಚುರ ಕಾ
ಲಿಡಲೆಡೆವಡೆಯದೆ ಕುರುಪತಿ 
ದಡಿಗನಣಂಗಳನ ಮೆಟ್ಟಿ ಮೆಲ್ಲನೆ ನಡೆದಂ

ದುರ್ಯೊಧನನು ಂಗಕ್ಕೆ ಕಾಲಿಟ್ಟ ಸಂದರ್ಭವನ್ನು ಕವಿ ಇಲ್ಲಿ ವಿವರಿಸಿದ್ದಾನೆ. ಲಕ್ಷಾಂತರ ಜೀವಹಾನಿಯ ಪರಿಣಾಮದಿಂದ ರಕ್ತದ ಸಮುದ್ರವೇ ಅಲ್ಲಿದ್ದಿತು. ಆ ರುಧಿರ ಕಡಲಿನಲ್ಲಿ ಯೋಧರ ಆಯುಧಗಳೆಲ್ಲ ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೌರವೇಶ್ವರನು ಆ ನೆಲದಲ್ಲಿ ಮುರಿದು ಬಿದ್ದು ಹೂತುಹೋಗಿರುವ ಆಯುಧಗಳ ಮೇಲೆಯೇ ಪಾದಗಳನ್ನು ಊರಿ ನಡೆಯಬೇಕಾಯಿತು. ಇದರಿಂದ ಕೌರವೇಶ್ವರನ ಪಾದಗಳಿಗೆ ನೋವಾಯಿತಂತೆ. ಪಾದ ಊರಲು ಸ್ಥಳವಿಲ್ಲದೆ ಅಲ್ಲಿ ಬಿದ್ದಿದ್ದ ಭಾರಿ ಹೆಣಗಳ ಮೇಲೆ ಕಾಲಿಟ್ಟು ಮೆಲ್ಲನೆ ಬೀಳದಂತೆ ನಡೆಯುವಂತಾಯಿತೆಂದು ಕವಿ ವಿವರಿಸಿದ್ದಾನೆ.

ಶಬ್ದಾರ್ಥ: ಉಡಿದಿರ್ದ-ಮುರಿದ; ಕೈದು-ಆಯುಧ; ತಳ-ಪಾದ; ಉರ್ಚು-ಚುಚ್ಚು; ದಡಿಗವೆಣ (ದಡಿಗ+ಪಣ)ಭಾರಿ ಹೆಣ.

೨) ಇಭಶೈಲಂಗಳನೇಜಿಯೇಟಿ ರುಧಿರಸ್ಕೋತಂಗಳಂ ದಾಂಟಿ ದಾಂ
ಟಿಭದೋರ್ನಿಲಲತಾಪ್ರತಾನವಿಪಿನವಾತಂಗಳೊಳ್ ಸಿಕ್ಕಿಸಿ
ಲೈ ಭರಂಗೆಯ್ದುಬಿದೆಯ್ಲಿ ಸಂಜಯಶಿರಸ್ಕಂಧಾವಲಂಬಂ ಕುರು
ಪ್ರಭು ಕಂಡಂ ಶರಜಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ

ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿರುವ ಸ್ಥಿತಿಯನ್ನು ಕಂಡು ಅವನೊಡನಿದ್ದ ಸಂಜಯ ಕಣ್ಣೀರು ಗರೆದನು. ತನುಜಾನುಜರ ವಿಯೋಗದಿಂದ ನೊಂದು ನೊಂದು ಮುಂದೆ ಸಾಗುವಾಗ ದುರ್ಯೊಧನನು ತನ್ನ ಗುರುವಾದ ದ್ರೋಣರ ಶವವನ್ನು ಎದಿರುಗೆ ವ ಸಂದರ್ಭವನ್ನು ರನ್ನ ಈ ಪದ್ಯದಲ್ಲಿ ವಿವರಿಸಿದ್ದಾನೆ.

ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದೊಡ್ಡ ದೊಡ್ಡ ಆನೆಗಳ ಪರ್ವತದಂತಹ ದೇಹವನ್ನು ಏರಿ ಏರಿ, ಹರಿಯುತ್ತಿರುವ ರಕ್ತದ ಕಾಲುವೆಯನ್ನು ದಾಟಿ ದಾಟಿ ಮುಂದುವರೆಯುತ್ತಿದ್ದನು. ಆ ಸಂದರ್ಭದಲ್ಲಿ ದಟ್ಟವಾದ ಕಾಡಿನಲ್ಲಿ ಇಳಿಬಿದ್ದಿರುವ ಕಪ್ಪುಬಳ್ಳಿಗಳಂತೆ ಚಾಚಿಕೊಂಡಿದ್ದ ಆನೆಗಳ ಸೊಂಡಿಲುಗಳನ್ನು ಎಡವಿದ್ದರಿಂದ ಕಾಲು ತೊಡರಿತಂತೆ. ರಣರಂಗ ದಲ್ಲಿ ನಡೆಯುತ್ತಿದ್ದರೂ ಮಹಾರಣ್ಯದಲ್ಲಿ ನಡೆಯುತ್ತಿರುವಂತೆ ಅವನಿಗೆ ಭಾಸವಾಯಿತಂತೆ. ಆಗ ಕೌರವನು ಸಂಜಯನ ಹೆಗಲ ಮೇಲೆ ಕೈ ಹಾಕಿ ಕೆಳಕ್ಕೆ ಬೀಳದ ಹಾಗೆ ನಡೆದು ಬರುವಾಗ, ನೂರಾರು ಬಾಣಗಳ ಜಾಲಕ್ಕೆ ಸಿಕ್ಕಿ ಜರ್ಜರಿತವಾಗಿ ಸತ್ತು ಬಿದ್ದಿದ್ದ ದ್ರೋಣನ ಶವವನ್ನು ಕಾಣುವನು.

ಶಬ್ದಾರ್ಥ: ಇಭಶೈಲ-ಆನೆಗಳ ಬೆಟ್ಟ, ರುಧಿರ-ರಕ್ತ ಸ್ರೋತ-ನದಿ; ಇಭದೋ- ಆನೆಗಳ ಸೊಂಡಿಲು; ನೀಲಲತಾ-ಕಪ್ಪು ಬಳ್ಳಿ; ಪ್ರತಾನ-ಗುಂಪು; ವಾತ-ಸಮೂಹ; ಉಳಿದೆ-ಲೆಕ್ಕಿಸದೆ; ಸ್ಕಂಧ-ಹೆಗಲು; ಗಾತ್ರ-ದೇಹ; ತ್ರಾಣ-ರಕ್ಷಕ (ಕವಚ).

ವ|| ಅಂತು ನಿಸರ್ಗದುಷ್ಪಧೃಷ್ಟದ್ಯುಮ್ಮ ಕಚನಿಗ್ರಹಕರರು, ಮೌಳಿಯಾಗಿರ್ದ ಭಾರಧ್ವಾಜನಿರವಂ ರಾಜರಾಜ ನೋಡಿ. ಸ್ವಭಾವತಃ ದುಷ್ಟ ಪ್ರವೃತ್ತಿಯವನಾದ ಧೃಷ್ಟದ್ಯುಮ್ಮನ ಕೈಯಿಂದ ತಲೆಕಡಿಸಿಕೊಂಡು ಸತ್ತುಬಿದ್ದಿರುವ ಭರದ್ವಾಜ ವಂಶಜನಾದ ದ್ರೋಣಾಚಾರರ ಕಳೇಬರವನ್ನು ನೋಡಿದಾಗ ದುರ್ಯೋಧನನಿಗೆ ದುಃಖ ಉಮ್ಮಳಿಸಿ ಬಂದಿತು. ಶಬ್ದಾರ್ಥ: ನಿಸರ್ಗದುಷ್ಟ-ಸ್ವಭಾವತಃ ಕೆಟ್ಟವನಾದ; ಕಚ-ತಲೆಗೂದಲು; ನಿಗ್ರಹ-ಶಿಕ್ಷೆ, ದಂಡನೆ; ವಿಲುಳಿತ-ತಿರುಚಲ್ಪಟ್ಟು; ಮೌಳಿ-ತಲೆ; ಭಾರಧ್ವಾಜ-ದ್ರೋಣ.

೩) ಅಆಯೆಮೆ ಬಿಲ್ಲ ಬಿನ್ನಣಕ್ಕೆ ಗಾಂಡೀವಿಯಲ್ಕು ಪಿನಾಕಪಾಣಿಯುಂ 
ನೆಳೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮುಪೇಕ್ಷೆಯೆಂ 
ದಯೆನಿದೆನ್ನ ಕರ್ಮವಶವೆಂದೆಯೆಂ ನಿಮಗಿಂತು ಸಾವುಮೀ 
ತೆಆದಿನಕಾರಣಂ ನಆಯೆ ಸಂಭವಿಸಿರ್ದುದೊ ಕುಂಭಸಂಭವಾ

ದ್ರೋಣಾಚಾರರ ಶವದ ಮುಂದೆ ನಿಂತು ದುರ್ಯೋಧನನು ಪ್ರಲಾಪಿಸಿದ ಬಗೆ ಇಲ್ಲಿದೆ. ದ್ರೋಣರನ್ನು ಕಂಡ ಕೌರವೇಶ್ವರನು “ಅಯ್ಯೋ ನೀವು ಬಿಲ್ವಿದ್ಯಾಪಾರಂಗತರೆಂಬುದು ಇಡೀ ಜಗತ್ತಿಗೇ ತಿಳಿದಿದೆ. ಅಷ್ಟೇ ಅಲ್ಲ ಅರ್ಜುನನೇಕೆ, ಸಾಕ್ಷಾತ್ ಪರಮೇಶ್ವರನೂ ನಿಮ್ಮನ್ನು ಎದುರಿಸಿ ಗೆಲ್ಲಲು ಅಸಮರ್ಥ. ನೀವು ವೀರಾವೇಶದಿಂದ ಹೋರಾಡಿ ಪಾಂಡವರನ್ನು ಜಯಿಸದೆ ಉದಾಸೀನ ತೋರಿದಿರೆಂದು ನಾನಾದರೂ ಭಾವಿಸುವುದಿಲ್ಲ. ನನ್ನ ಕರ್ಮದ ಫಲದಿಂದಾಗಿ ನೀವು ಜಯವನ್ನು ಸಾಧಿಸಲಾಗ ಲಿಲ್ಲವಷ್ಟೇ; ನಿಮ್ಮಂತಹ ಪರಾಕ್ರಮಿಗೆ ಇಂತಹ ಸಾವು ಹೇಗೆ ಸಂಭವಿಸಿತೋ ಕಾರಣ ತಿಳಿಯದಾಗಿದೆ” ಎಂದು ದುಃಖಿಸಿದನು.

ಶಬ್ದಾರ್ಥ: ಬಿನ್ನಣ-ಚಾತುರ್ಯ, ನೈಪುಣ್ಯ ಕೌಶಲ್ಯ: ಪಿನಾಕಪಾಣಿ-ಶಿವ ನೆಲೆಯನ್-ಅಸಮರ್ಥ, ಕುಂಭಸಂಭವದ್ರೋಣ.

ವ|| ಎಂದು ದುಃಖಂಗೆಯ್ದು ಕುಂಭಸಂಭವನಂ ಪ್ರದಕ್ಷಿಣಂಗೆಯ್ದು ಬರುತ್ತಮಾ ದಿಶಾಭಾಗದೊಳ್ ಎಂದು ದುಃಖಿಸುತ್ತಾ ದುರ್ಯೋಧನನು ದ್ರೋಣಾಚಾರರ ದೇಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು, ಅಲ್ಲಿಂದ ಮುಂದುವರೆಯುವನು – ಆ ದಿಕ್ಕಿನಲ್ಲಿ.

೪) ಅರೆಮುಗಿದಿರ್ದ ಕಲರಲರ್ದಮೊಗಂ ಕಡಿವೋದ ಕಮ್ಯುಮಾ 
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ.
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳು ಬಿಳನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ

ದ್ರೋಣರ ಶವದ ಮುಂದೆ ದುಃಖಿಸಿ, ಅವರಿಗೆ ನಮಸ್ಕರಿಸಿ ಮುಂದೆ ಸಾಗಿದ ದುರ್ಯೋಧನನಿಗೆ ಅಭಿಮನ್ಯುವಿನ ಶವ ಸಿಗುತ್ತದೆ. ದುರ್ಯೊಧನ ಕಂಡ ಅಭಿಮನ್ಯುವಿನ ಮೃತದೇಹದ ವರ್ಣನೆಯನ್ನು ರನ್ನ ಇಲ್ಲಿ ನೀಡಿರುವನು. ದುರ್ಯೋಧನನ ಕಣ್ಣಿಗೆ ಅಭಿಮನ್ಯುವಿನ ಶವ ಕಂಡುದು ಹೀಗೆ: “ಅಭಿಮನ್ಯುವಿನ ಕಣ್ಣರೆಪ್ಪೆಗಳು ಅರ್ಧಮುಚ್ಚಿ ತೆರೆದಿದ್ದವಂತೆ. ಅವನ ಕೈಗಳು ಕತ್ತರಿಸಿ ಹೋಗಿದ್ದವು. ಶತ್ರುಗಳ ಬಾಣದ ಏಟಿನಿಂದಾಗಿ ಅವನ ದೇಹದ ತುಂಬಾ ಗಾಯಗಳಾಗಿದ್ದವು. ಅವನ ದೇಹವು ರಕ್ತದ ಮಡುವಿನಲ್ಲಿ ಅದ್ದಿದಂತಿತ್ತು.” ಯುದ್ಧದಲ್ಲಿ ಮಹಾ ಪರಾಕ್ರಮಿ ಎನಿಸಿದ್ದ ಅಭಿಮನ್ಯುವನ್ನು ದುರ್ಯೊಧನನು ಇಂತಹ ಸ್ಥಿತಿಯಲ್ಲಿ ಕಂಡನೆಂದು ಕವಿ ವರ್ಣಿಸಿದ್ದಾನೆ.

ಶಬ್ದಾರ್ಥ: ಕಲರ್ (ಕಣ್+ಮಲರ್)-ಕಣ್ಣೆಂಬ ಹೂ; ಅಲರ್ದ-ಅರಳಿದ ಆಸುರತರ-ಅತಿಭಯಂಕರ; ಲೋಹಿತ ವಾರ್ಧಿ-ರಕ್ತದ ಕಡಲು; ಅಬ್ದು-ಮುಳುಗಿ; ಆಜಿ-ಯುದ್ಧ. ವು ಅಂತಾತನನಹಿಕೇತನಂ ನೋಡಿ-ಹೀಗೆ ಅಭಿಮನ್ಯುವನ್ನು ದುರ್ಯೋಧನ ನೋಡಿದನು. ಶಬ್ದಾರ್ಥ: ಅಹಿಕೇತನ-ಸರ್ಪಧ್ವಜ, ದುರ್ಯೋಧನ.

೫) ಗುರುಪಣ್ಣಿದ ಚಕ್ರವ್ಯೂ 
ಹರಚನೆ ಪೆರ್ಗರಿದು ಪುಗಲದಂ ಪೊಕ್ಕು ರಣಾ
ಜರದೊಳರಿನೃಪರನಿಕ್ಕಿದ
ನರಸುತ ನಿನ್ನೊ ರೆಗೆ ದೊರೆಗೆ ಗಂಡರುಮೊಳರೇ

ಅಭಿಮನ್ಯುವಿನ ಶವವನ್ನು ಕಂಡಾಗ ದುರ್ಯೋಧನನಾಡುವ ಮೆಚ್ಚುಗೆಯ ಮಾತುಗಳನ್ನು ನಾವು ಈ ಮೇಲಿನ ಪದ್ಯದಲ್ಲಿ ಕಾಣಬಹುದು. ದುರ್ಯೊಧನನು ಅಭಿಮನ್ಯುವಿನ ಸಾಹಸವನ್ನು ಮೆಚ್ಚುತ್ತಾ ‘ಗುರುದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಒಳಪ್ರವೇಶಿಸಲು ಬೇರಾರಿಗೂ ಸಾಮರ್ಥ್ಯವಿರಲಿಲ್ಲ. ಆದರೆ ನೀನು ನಿನ್ನ ಸಾಮರ್ಥ್ಯದಿಂದ ಚಕ್ರವ್ಯೂಹವನ್ನು ಭೇದಿಸಿದೆ. ಒಳನುಗ್ಗಿ ಪರಾಕ್ರಮಿಗಳನ್ನು ಎದುರಿಸಿ ಕೊಂದ ನೀನು, ಅರ್ಜುನನಿಗೆ ತಕ್ಕ ಮಗನಾಗಿದ್ದೀಯೆ. ನಿನ್ನ ಧೈರ್ಯ-ಸಾಹಸಗಳಿಗೆ ಸಮಾನರಾದ ಪರಾಕ್ರಮಿಗಳು ಬೇರೆ ಯಾರಿದ್ದಾರೆ?” ಎಂದು ಹೊಗಳಿದನು. ಅಭಿಮನ್ಯು ಶತ್ರುಪುತ್ರನಾಗಿದ್ದರೂ ಅವನ ಗುಣವನ್ನು ಮೆಚ್ಚುವ ದುರ್ಯೋಧನನ ಅಂತಃಕರಣ ಇಲ್ಲಿ ಅನಾವರಣಗೊಂಡಿದೆ.

ಶಬ್ದಾರ್ಥ: ಹಣ್ಣು (ಕಿ)-ರಚಿಸು; ಪುಗಲ್-ಪ್ರವೇಶಿಸಲು; ರಣಾಜಿರ-ಯುದ್ಧಭೂಮಿ; ಅರಿ-ಶತ್ರು: ನರ-ಅರ್ಜುನ; ಒರೆದೊರೆ-ಸರಿಸಮ.

೬) ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ

ಅಭಿಮನ್ಯುವಿನ ಶವದ ಮುಂದೆ ನಿಂತ ದುರ್ಯೋಧನನು ಅವನ ಪ್ರಶಂಸೆಯನ್ನು ಮುಂದುವರೆಸುತ್ತಾ “ಅಸಮ ಶಾಲಿ ಯಾದ ಅಭಿಮನ್ಯು ಕುಮಾರನೆ, ನಿನ್ನಂತಹ ಪರಾಕ್ರಮಿಗಳು ಮತ್ತೊಬ್ಬರಿಲ್ಲ. ನಿನ್ನ ಮುಂದೆ ನಿಂತಿರುವನಾನು ಬೇಡಿಕೊಳ್ಳುವುದಿಷ್ಟೇ; ನಿನ್ನ ಸಾಹಸದ ಹತ್ತನೇ ಒಂದಂಶವಾದರೂ ನನ್ನಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನನಗೆ ಉಂಟಾಗಲಿ” ಎಂದು ಪ್ರಾರ್ಥಿಸಿದನು.

ಶತ್ರುವಿನ ಮಗನಾದ ಅಭಿಮನ್ಯುವನ್ನು ಕಂಡು ರೋಷದಿಂದ ಕೆರಳುವ ಬದಲು, ಅವನ ಸಾಹಸಗುಣವನ್ನು ಮೆಚ್ಚುವ ದುರ್ಯೊಧನನ ವ್ಯಕ್ತಿತ್ವ ನಿಜಕ್ಕೂ ಅಪರೂಪದ್ದೆಂಬಂತೆ ರನ್ನ ಚಿತ್ರಿಸಿದ್ದಾನೆ. ಅಲ್ಲದೆ ಸತ್ತು ವೀರಮರಣವನ್ನಪ್ಪಿದರೂ ಸರಿಯೇ, ಯುದ್ಧ ಮಾಡಿಯೇ ತೀರಬೇಕೆಂಬ ಅವನ ಆಂತರ್ಯದ ಛಲ ಇಲ್ಲಿ ಪುಟಿದೆದ್ದಿದೆ. ಆದ್ದರಿಂದಲೇ ಅವನು ಬಂದರೆ ವೀರಮರಣ ಬರಲಿ ಎಂದು ಅಪೇಕ್ಷಿಸುತ್ತಿದ್ದಾನೆ. ಅವನ ಕ್ಷಾತ್ರಗುಣಕ್ಕೆ ತೀರಾ ಸಹಜವಾದ ಮಾತಿದಾಗಿದೆ. ಶಬ್ದಾರ್ಥ:ಭವದ್ವಿಕ್ರಮ (ಭವತ್+ವಿಕ್ರಮ)-ನಿನ್ನ ಶೌರ್ಯ; ನಿಜಸಾಹಸ-ನಿನ್ನ ಪರಾಕ್ರಮ; ಏಕದೇಶ-ಒಂದು ಅಂಶ, ಹೋಲುವ; ಅನುಮರಣ-ಅನುರೂಪವಾದ (ಅನುಗುಣವಾದ) ಮರಣ.

ವ|| ಎಂದಾತ್ಮಗತದೊಳ ಬಗೆದು ಅಂತಭಿಮನ್ಯುಗೆ ಕಯ್ದಳಂ ಮುಗಿದು ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರನಂ ನೆನೆದುತಕಂಠನಾಗಿ ತದಾಸನ್ನ ಪ್ರದೇಶದೊಳ್ ತನ್ನ ಕುಮಾರನಂ ಕಂಡು ಪುತ್ರಸ್ನೇಹಕಾತರಹೃದಯನಾಗಿಗಾಂಧಾರೀ ನಂದನಂ ಭಾನುಮತೀನಂದನನ ವದನಾರವಿಂದಮಂ ನೋಡಿ-ಅಭಿಮನ್ಯುವಿಗೆ ಬಂದಂತಹ ವೀರಮರಣವು ತನಗೂ ಸಂಭವಿಸಲೆಂದು ದುರ್ಯೊಧನನು ಮನದಲ್ಲೇ ಪ್ರಾರ್ಥಿಸಿ, ಅಭಿಮನ್ಯುವಿಗೆ ಕೈ ಮುಗಿದು ಮುಂದುವರೆಯುವಾಗ ಅವನಿಗೆ ತನ್ನ ಮಗನಾದ ಲಕ್ಷಣಕುಮಾರನ ನೆನಪಾಗುತ್ತದೆ.

ದುಃಖ ದಿಂದ ಗಂಟಲು ಉಬ್ಬುತ್ತದೆ. ಅವನ ಹೃದಯ ಪುತ್ರವಾತ್ಸಲ್ಯದಿಂದ ಮಿಡಿಯುತ್ತದೆ. ಅಷ್ಟರಲ್ಲೇ ಅವನಿಗೆ ಮಗನ ತಾವರೆಯಂತಹ ಮೊಗ ಗೋಚರಿಸುತ್ತದೆ.

ಶಬ್ದಾರ್ಥ: ಮನ್ಮೂದ್ಧತಕಂಠನಾಗಿ-ಶೋಕಭರಿತವಾದ ಧ್ವನಿಯುಳ್ಳವನಾಗಿ; ತದಾಸನ್ನ (ತತ್+ಆಸನ್ನು-ಅದಕ್ಕೆ ಹತ್ತಿರದ; ಗಾಂಧಾರೀನಂದನ-ದುರ್ಯೊಧನ; ಭಾನುಮತಿನಂದನ-ಲಕ್ಷಣಕುಮಾರ.

೭) ಜನಕಂಗೆ ಜಲಾಂಜಲಿಯಂ 
ತನೂಭವಂ ಕುಡುವುದುಚಿತಮದುಗೆಟ್ಟಗಳ
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ

ತನ್ನ ಮಗ ಲಕ್ಷಣಕುಮಾರನ ಶವವನ್ನು ನೋಡಿದಾಕ್ಷಣ ದುರ್ಯೊಧನನ ದುಃಖದ ಕಟ್ಟೆಯೊಡೆಯುತ್ತದೆ. ಬಾಳಿ ಬದುಕಬೇಕಾಗಿದ್ದ ತನ್ನ ಕರುಳಿನ ಕುಡಿಯನ್ನು ಕಂಡ ದುರ್ಯೊಧನನು “ತಂದೆಯಾದವನಿಗೆ ಮಗನಾದವನು ಎಳ್ಳು-ನೀರಿನ ತರ್ಪಣವನ್ನು ಕೊಡಬೇಕಾದ್ದು ಲೋಕರೂಢಿ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಂದೆಯಾದ ನಾನೇ ಮಗನಾದ ನಿನಗೆ ತರ್ಪಣವನ್ನು ಬಿಡುವಂತಾಯಿತೇ? ಅಯ್ಯೋ ಮಗನೆ, ನನಗಿಂತ ಮೊದಲು ಪ್ರಾಣವನ್ನು ತೊರೆದು ನೀನೇಕೆ ಹೀಗೆ ಕ್ರಮವನ್ನು ತಪ್ಪಿಸಿದೆ?” ಎಂದು ದುಃಖಿಸಿದನು. ಪುತ್ರಶೋಕತಪ್ತನಾದ ದುರ್ಯೊಧನನ ವಿಲಾಪ ಕರುಳು ಮಿಡಿಯುವಂತೆ ಇಲ್ಲಿ ಚಿತ್ರಿತವಾಗಿದೆ. 

ಶಬ್ದಾರ್ಥ: ಜಲಾಂಜಲಿ ಲ+ಅಂಜಲಿ)-ತರ್ಪಣ; ಕ್ರಮವಿಪರ್ಯಯ-ಪದ್ಧತಿ ತಪ್ಪುವುದು, ಕ್ರಮ ವ್ಯತ್ಯಾಸ.

ವ|| ಎಂದು ಪಶ್ಚಾತ್ತಾಪಂಗೆಯೆ ಸಂಜಯಂಸಂತೈಸಿ ಮುಂದೊಮ್ಮೆಭೀಮಸೇನನ ಗದಾಪರಿಘ ಪ್ರಹರಣದಿಂದ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನಿರ್ದೆಡೆಯಂ ಕುರುರಾಜನೆಯೆವಂದಾಗಳ್ ಪುತ್ರನಿಗೆ ತರ್ಪಣ ಕೊಡುವ ಸಂದರ್ಭವೊದಗಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಿರುವ ದುರ್ಯೋಧನನನ್ನು ಸಂಜಯನು ಸಂತೈಸಿ, ಮುಂದೆ ಕರೆದೊಯ್ದನು. ಅಲ್ಲಿ ಅವರಿಗೆ ಭೀಮಸೇನನ ಗದಾಪ್ರಹಾರದಿಂದ ಹತನಾಗಿ ರಕ್ತದ ಪ್ರವಾಹದೊಳಗೆ ಬಿದ್ದಿದ್ದ ಯುವರಾಜನಾದ ದುಶ್ಯಾಸನನ ಮೃತದೇಹ ಎದಿರಾಯಿತು. ಶಬ್ದಾರ್ಥ: ಪರಿಘ-ಆಯುಧ; ಪ್ರಹರ-ಹೊಡೆತ.

೮) ನಿನ್ನಂ ಕೊಂದಂ ಗಡಮೊಳ 
ನಿನ್ನುಂ ಕೊಂದವನನಿಕ್ಕಿ ಕೊಲ್ಲದೆ ಮಾಣ್ಣಾ 
ನಿನ್ನುಂ ಮೊಳೆಂ ಗಡಸಾಲದೆ
ನಿನ್ನಯ ಕೂರ್ಮೆಗಮದನ್ನ ಸೌಧರ್ಮಿಕೆಗಂ

ದುರ್ಯೊಧನನೆಂದರೆ ದುಶ್ಯಾಸನನಿಗೆ ಅಪರಿಮಿತವಾದ ಪ್ರೀತಿ. ಅವನ ಭ್ರಾತೃವಾತ್ಸಲ್ಯಕ್ಕೆ ಎಣೆಯಿಲ್ಲ. ಅಂತಹ ತಮ್ಮನ ಶವವನ್ನು ಕಂಡಾಗ ದುರ್ಯೊಧನನಿಗೆ ತಾನಿನ್ನೂ ತಮ್ಮನ ಸಾವಿಗೆ ಕಾರಣನಾದವನನ್ನು ಬದುಕಲು ಬಿಟ್ಟಿರುವೆನಲ್ಲಾ ಎಂದು ರೋಷ ಉಕ್ಕುತ್ತದೆ. ಅದನ್ನು ಅವನು ದುಶ್ಯಾಸನನ ಶವದ ಮುಂದೆ ನಿಂತು ಅಭಿವ್ಯಕ್ತಿಸುವುದನ್ನು ಕವಿ ರನ್ನ ಈ ಮೇಲಿನ ಪದ್ಯದಲ್ಲಿ ಚಿತ್ರಿಸಿರುವನು.

“ಎಲೈ ಯುವರಾಜನೇ, ನಿನ್ನನ್ನು ಕೊಂದವನು (ಭೀಮನು) ಇನ್ನೂ ಬದುಕಿರುವನು. ಅವನನ್ನು ಕೊಂದು, ನಿನ್ನ ಸಾವಿನ ಸೇಡು ತೀರಿಸಿಕೊಳ್ಳದ ನಾನಿನ್ನೂ ಬದುಕುಳಿದಿರುವೆ. ನೀನು ನನ್ನಲ್ಲಿ ತೋರಿದ ಪ್ರೀತಿಗೆ ಇದು ಸರಿಯಾದ ಮರ್ಯಾದೆಯಲ್ಲ, ಇದೆಂತಹ ಸಜ್ಜನಿಕೆ ನನ್ನದು?’ ಎಂದು ದುರ್ಯೋಧನನು ತಮ್ಮನ ಶವದ ಮುಂದೆ ದುಃಖಿಸಿದನು.

ಶಬ್ದಾರ್ಥ: ಗಡಮೋಳನಿನ್ನುಂ ಇನ್ನೂ ಬದುಕಿದ್ದಾನಲ್ಲ; ಇಕ್ಕಿ-ಬಡಿದು, ಹೊಡೆದು; ಮಾಣ್-ಬಿಡು, ಸುಮ್ಮನಿರುವುದು; ಕೂರ್ಮ-ಪ್ರೀತಿ; ಸೌಧರ್ಮ-ಸಜ್ಜನಿಕೆ.

೯) ಜನನೀಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ 
ಜನಮೆಂಬಂತಿವನುಂಡೆನಾಂ ಬಳಿಕೆ ನೀಂ ಬಾಲತ್ವದಿಂದೆಲ್ಲಿಯುಂ 
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆಂದೆ ನೀಂ ಮು೦ಚಿದಯ್ 
ಮೊನೆಯೊಳ್ ಸೂಟ್‌ತಡಮಾಡ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ 

ಪ್ರಸ್ತುತ ಪದ್ಯದಲ್ಲಿಯೂ ಕವಿಯು ದುಶ್ಯಾಸನನ ಶವದ ಮುಂದೆ ನಿಂತು ಶೋಕಿಸುವ ದುರ್ಯೊಧನನ ಅಳಲನ್ನು ಚಿತ್ರಿಸಿದ್ದಾನೆ. ತನ್ನ ದುಃಖದ ಮಾತುಗಳನ್ನು ಮುಂದುವರೆಸುತ್ತಾ ದುರ್ಯೋಧನನು ಹೀಗೆಂದು ಪ್ರಲಾಪಿಸುವನು; “ಎಲೈ ದುಶ್ಯಾಸನನೇ, ತಾಯಿಯ ಎದೆ ಹಾಲನ್ನು ನಾನು ಮೊದಲು ಕುಡಿದೆ, ಬಳಿಕ ನೀನು ಕುಡಿದೆ. ಇದರಂತೆಯೇ ಅಮೃತವೆನಿಸಿದ ಸೋಮರಸವನ್ನೂ, ರುಚಿಕರವಾದ ದಿವ್ಯ ಜನವನ್ನೂ ನಾನು ಮೊದಲು ಸೇವಿಸಿದೆ. ಅನಂತರವೇ ಅವುಗಳನ್ನು ನೀನು ಸೇವಿಸುತ್ತಿದ್ದೆ. ಬಾಲ್ಯದಿಂದ ಇಂದಿನವರೆಗೂ ಎಂದಿಗೂ ಈ ಕ್ರಮವನ್ನು ನೀನು ಉಲ್ಲಂಘಿಸಿರಲಿಲ್ಲ. ಅದೇ ರೀತಿ ಸಾವಿನಲ್ಲೂ ನಾನು ಮೊದಲಿಗನಾಗಬೇಕಿತ್ತು.

ಆದರೆ ನೀನು ಮೊದಲು ಯುದ್ಧದಲ್ಲಿ ಮರಣವನ್ನಪ್ಪಿ ಏಕೆ ಕ್ರಮವನ್ನು ಉಲ್ಲಂಘಿಸಿದೆ? ಹಾ, ಪ್ರಿಯಸಹೋದರನಾದ ದುಶ್ಯಾಸನನೇ” ಎಂದು ದುರ್ಯೋಧನನು ಶೋಕತುಂಬಿ ಗೋಳಾಡಿದನು.

ಶಬ್ದಾರ್ಥ: ಸೋಮಾಮೃತ-ಸೋಮರಸ; ಮೊನೆಯೊ-ಯುದ್ಧದಲ್ಲಿ; ಸೂಟ್- ಸರದಿ; ಎಡೆ-ಸಮಯ; ಉಲ್ಲಂಘನೆತಪ್ಪುವುದು, ಮೀರುವುದು.

ವ|| ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೇಬರಮಂ ನೋಡಲಾರದೆ ಅಲ್ಲಿಂ ತಳರ್ದು ದಿನಕರತನೂಜನಂ ರಾಜರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತ ಲೋಚನನುಮಾಗಿ ದುಶ್ಯಾಸನನ ಮುಂದೆ ನಿಂತು ಅತಿಯಾಗಿ ಪ್ರಲಾಪಗೈಯ್ದ ದುರ್ಯೋಧನನಿಗೆ ಹೆಚ್ಚು ಹೊತ್ತು ನಿಂತು ತನ್ನ ತಮ್ಮನ ಶವವನ್ನು ನೋಡಲಾಗಲಿಲ್ಲ. ಅಲ್ಲಿಂದ ಮುಂದೆ ಸಾಗಿದಾಗ ಅವನಿಗೆ ದಿವಾಕರ ಪುತ್ರನಾದ ಕರ್ಣನ ಮೃತದೇಹ ಎದಿರಾಯಿತು. ಅವನನ್ನು ನೋಡಿದ ದುರ್ಯೋಧನನಿಗೆ ಕಣ್ಣೀರಕೋಡಿ ಉಕ್ಕಿಹರಿಯಿತು. ಕಣ್ಣೀರು ಸುರಿಸುತ್ತಾ ಅವನು ಕರ್ಣನ ಶವವನ್ನು ನೋಡುತ್ತಾ ಈ ಮುಂದಿನಂತೆ ಶೋಕಿಸುವನು. 

ಶಬ್ದಾರ್ಥ: ಕಳೇಬರ-ಶವ; ತಳರ್ದು-ಹೊರಟು.

೧೦) ಆನುಂ ದುಶ್ಯಾಸನನುಂ
ನೀನು ಮೂವರೆ ದಲಾತನುಂ ಕಳೆದ ಬಟ
ಕ್ಯಾನಂ ನೀನೆ ದಲೀಗಲ್
ನೀನುಮಗಲ್ಲೆತ್ತವೋದೆಯಂಗಾಧಿಪತೀ

ದುರ್ಯೊಧನನಿಗೆ ತನ್ನ ತಮ್ಮನಾದ ದುಶ್ಯಾಸನ ಮತ್ತು ಜೀವದ ಗೆಳೆಯನಾದ ಕರ್ಣನನ್ನು ಕಂಡರೆ ಅಪರಿಮಿತವಾದ ಪ್ರೀತಿಯಿತ್ತು. ಅವರಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ದುರ್ಯೊಧನ ದುಃಖಕ್ಕೆ ಎಣೆಯಿಲ್ಲದಾಯಿತು. ಕರ್ಣನ ಶವದ ಮುಂದೆ ನಿಂತು “ಎಲೈ ಕರ್ಣನೇ, ನಾನು, ದುಶ್ಯಾಸನ ಹಾಗೂ ನೀನು ಮೂವರೂ ಮೊದಲಿನಿಂದಲೂ ಮಹಾಮೈತ್ರಿಯಿಂದಿದ್ದೆವು. ನಮ್ಮನ್ನಗಲಿ ಮೊದಲು ದುಶ್ಯಾಸನ ದೂರವಾದ. ಆನಂತರ ನಾನು-ನೀನು ಇಬ್ಬರೂ ಇದ್ದೇವೆಂಬ ಸಮಾಧಾನವಿತ್ತು. ಆದರೀಗ ನೀನೂ ಸಾಯುವ ಮೂಲಕ ನನ್ನನ್ನು ಅಗಲಿ ದೂರಾಗಿ ಎಲ್ಲಿಗೆ ಹೋದೆ, ಎಲೈ ಅಂಗಾಧಿಪತಿಯಾದ ಕರ್ಣನೇ?” ಎಂದು ದುಃಖಿಸಿದನು.

ಶಬ್ದಾರ್ಥ: ದಲ್-ದಿಟ, ಅಲ್ಲವೇ, ಕಳೆದ-ತೀರಿದ.

೧೧)ನಿನ್ನ ಕಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನನ್ನದ ಜೀಯನ್ನದೆ ದೇ
ವೆನ್ನದೆ ಯೇಕುಸಿರಬರ್ಪೆಯಂಗಾಧಿಪತೀ

ದುರ್ಯೋಧನನಿಗೆ ಕರ್ಣನ ಸಾವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೇ ಪ್ರಾಣ ಎರಡು ಜೀವಗಳಂತಿದ್ದವರು ಅವರು. ದುರ್ಯೊಧನನನ್ನು ಕಂಡೊಡನೆ ಬಂದು ಅಪ್ಪಿಕೊಳ್ಳುತ್ತಿದ್ದ ಕರ್ಣ ಇಂದು ಶವವಾಗಿ ಕಣ್ಣೆದುರು ಬಿದ್ದಿದ್ದಾನೆ. ಇದನ್ನು ಕಂಡ ದುರ್ಯೊಧನನು “ನಿನ್ನ ಗೆಳೆಯನಾದ ಸುಯೋಧನ ಬಂದಿರುವನು. 

ಅವನನ್ನು ನೀನು ಕಸ್ತೆರೆದು ನೋಡುತ್ತಿಲ್ಲವೇಕೆ? ಅಪ್ಪಿಕೊಳ್ಳುತ್ತಿಲ್ಲವೇಕೆ? ಏನಪ್ಪಣೆ ಮಹಾಸ್ವಾಮಿ ಎನ್ನುತ್ತಿಲ್ಲವೇಕೆ? ಏಕೆ ಏನೂ ಮಾತನಾಡದೆ ಮೌನದಿಂದಿರುವೆ ಎಲೆ ಕರ್ಣನೇ ?” ಎಂದು ಗೋಳಾಡಿದನು. ತನ್ನ ಸ್ನೇಹಿತನ ಮೌನ ನಿದ್ರೆಯನ್ನು ಅವನು ಸಹಿಸುತ್ತಿಲ್ಲ. ಅಂತಹ ಅನನ್ಯವಾದ ಸ್ನೇಹ ಅವರಿಬ್ಬರದು. 

ಶಬ್ದಾರ್ಥ: ಕೆಳೆಯ-ಗೆಳೆಯ, ಸ್ನೇಹಿತ ಬೆಸನು-ಆಜ್ಞೆ: ಜೀಯ-ಯಜಮಾನ, ಒಡೆಯ.

೧೨) ಅನ್ನತಂ ಲೋಭಂ ಭಯಮಂ
ಅನಿತಾಂ ನೀನಿರ್ದ ನಾಡೊಳರ್ಕುಮೆ ರವಿನಂ
ದನ ನನ್ನಿ ಚಾಗಮಣ್ಣೆ
ಬಿನಿತರ್ಕ೦ ನೀನೆ ಮೊತ್ತಮೊದಲಿಗನಾದಯ್

ದುರ್ಯೋಧನನಿಗೆ ಕರ್ಣನ ಗುಣವಿಶೇಷಗಳೆಲ್ಲವೂ ಸಾಲುಸಾಲಾಗಿ ನೆನಪಿಗೆ ಬರುತ್ತವೆ. ಅವನ ಶವದ ಮುಂದೆ ನಿಂತು ದುರ್ಯೋಧನ “ಎಲೈ ಕರ್ಣನೇ ನೀನಿದ್ದ ರಾಜ್ಯದಲ್ಲಿ ಸುಳ್ಳೆಂಬುದಿಲ್ಲ, ಸ್ವಾರ್ಥ-ಜಿಪುಣತನಗಳಿರುವುದಿಲ್ಲ. ನಿನ್ನಂತಹ ಪರಾಕ್ರಮಿಯಿದ್ದ ನಾಡಲ್ಲಿ ಭಯವೆಂಬುದಕ್ಕೆ ಸ್ಥಳವಿಲ್ಲ. ಸತ್ಯದ ನಡೆಯಲ್ಲಿ,ತ್ಯಾಗದ ಗುಣದಲ್ಲಿ, ಪರಾಕ್ರಮದಲ್ಲಿ ನಿನಗಾರು ಸರಿಸಾಟಿಯಿಲ್ಲ . ನೀನು ಅದ್ವಿತೀಯ ”ಎಂದು ಮನದುಂಬಿ ಕರ್ಣನ ಗುಣಗಳನ್ನು ಕೊಂಡಾಡುವನು.

ಸತ್ಯಮಾರ್ಗದಲ್ಲಿ ನಡೆದ , ಮಹಾತ್ಮಾಗಿಯಾಗಿ ‘ ದಾನಶೂರ’ನೆನಿಸಿದ , ಅದ್ವಿತೀಯ ಪರಾಕ್ರಮಿಯಾದ ತನ್ನ ಗೆಳೆಯ ಕರ್ಣನನ್ನು ದುರ್ಯೋಧನ ಶೋಕದ ನಡುವೆಯೂ ಹೊಗಳಿ ಮಾತನಾಡುವುದು ಅವನ ಅಪ್ಪಟ ಗುಣಪಕ್ಷಪಾತಿ ನಡೆವಳಿಕೆಯನ್ನು ತೋರಿದೆ ಎನ್ನಬಹುದು.

ಶಬ್ದಾರ್ಥ: ಅನೃತ-ಸುಳ್ಳು; ನನ್ನಿ-ಸತ್ಯ; ಚಾಗ-ತ್ಯಾಗ; ಅಣು-ಪರಾಕ್ರಮ.

೧೩) ಆನರಿವೆಂ ಪೃಥೆಯದವಳ
ದಾನವರಿಪುವಟವನರ್ಕನನಂ ದಿವ್ಯ
ಜ್ಞಾನಿಸಹದೇವನ ವಂ
ನೀನಾರ್ಗಂದಾರುಮದೆಯರಂಗಾಧಿಪತೀ

ಕರ್ಣನು ಕುಂತಿಯ ಹಿರಿಯ ಮಗನೆಂಬ ಜನ್ಮರಹಸ್ಯವನ್ನು ದುರ್ಯೋಧನ ಬಲ್ಲವನಾಗಿದ್ದನು . ಅದನ್ನೀಗ ಅವನ ಕಳೇಬರದ ಮುಂದೆ ನಿಂತು ಪ್ರಕಟಿಸುವುದನ್ನು ಕವಿ ರನ್ನನು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ .

ಕರ್ಣನನ್ನು ಉದ್ದೇಶಿಸಿ ಮಾತನಾಡುತ್ತಾ ‘ನಿಜಕ್ಕೂ ನೀನು ದುರ್ಯೋಧನನು ” ನಿಜಕ್ಕೂ ನೀನು ಯಾರ ಮಗನೆಂಬ ಸಂಗತಿಯು ನನಗೆ ತಿಳಿದಿತ್ತು , ಕುಂತಿಗೆ ತಿಳಿದಿತ್ತು , ಅಲ್ಲದೆ ದಾನವರ ಶತ್ರುವಾದ ಶ್ರೀಕೃಷ್ಣನಿಗೂ ತಿಳಿದಿತ್ತು , ಸೂರ್ಯನಿಗೂ ಆರಿವಿತ್ತು.

ಮಾತ್ರವಲ್ಲ , ದಿವ್ಯಜ್ಞಾನಿಯಾದ ಸಹದೇವನೂ ಈ ವಿಚಾರವನ್ನು ಬಲ್ಲವನಾಗಿದ್ದನು. ಇವರನ್ನುಳಿದು ಬೇರಾರಿಗೂ ನೀನಾರೆಂಬ ಸಂಗತಿ ತಿಳಿದಿರಲಿಲ್ಲ ‘ ಎಂದು ಸ್ಮರಿಸಿಕೊಂಡನು . ಕುಂತಿಯ ಹಿರಿಯ ಮಗನೆಂಬುದು ತಿಳಿದಿದ್ದರೆ ಕರ್ಣನೇ ರಾಜನಾಗುವ ಅವಕಾಶವಿತ್ತು.

ತಿಳಿದಿದ್ದವರಾರು ಅವನಿಗೂ ಅದನ್ನು ಹೇಳಲಿಲ್ಲ. ಕರ್ಣ ದುರಂತ ನಾಯಕನೆನಿಸಿದನು . ದುರ್ಯೋಧನ ಈಗ ಅದನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಡುವಂತಿದೆ.

ಶಬ್ದಾರ್ಥ: ಪೃಥೆ-ಕುಂತಿ; ದಾನವರಿಪು-ಕೃಷ್ಣ; ಅರ್ಕ-ಸೂರ್ಯ.

೧೪) ನೀನುಳ್ಳೋಡುಂಟು ರಾಜ್ಯಂ
ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್
ನೀನುಲ್ಲೊಡುಂಟು ಪೀಡೆಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ

ಮರ್ಯೋಧನನಿಗೆ ಕರ್ಣನನ್ನು ಕಂಡರೆ ಗಾಢವಾದ ಸ್ನೇಹ – ಮಮಕಾರಗಳು , ಕರ್ಣ ಸತ್ತಿರುವುದರಿಂದ ಅವನಿಗೆ ತನ್ನ ಅಧಿಕಾರ , ಐಶ್ವರ್ಯ , ಬದುಕು – ಎಲ್ಲವೂ ಅರ್ಥಹೀನವಾಗಿ ಕಂಡವಂತೆ , ಕರ್ಣನಿಲ್ಲದ ಯಾವ ಸುಖವೂ ತನಗೆ ಬೇಡವೆಂದು ದುರ್ಯೋಧನ ಆಡುವ ಮಾತುಗಳನ್ನು ರನ್ನ ಈ ಮೇಲಿನ ಪದ್ಯದಲ್ಲಿ ವಿವರಿಸಿದ್ದಾನೆ . ದುರ್ಯೋಧನನಾಡುವ ಈ ಮಾತುಗಳಲ್ಲಿ ಅವರಿಬ್ಬರ ಅಗಾಧ ಸ್ನೇಹದ ಚಿತ್ರಣವಿದೆ .

“ಎಲೈ ಕರ್ಣನೇ , ನೀನು ಬದುಕಿದ್ದರೆ ನನಗೆ ಈ ರಾಜ್ಯವಿದ್ದಂತೆ , ನೀನಿದ್ದರೆ ಮಾತ್ರ ನನ್ನ ರಾಜಪದವಿಗೆ ಅರ್ಥಬರುವುದು , ನೀನಿದ್ದರೆ ಮಾತ್ರ ಈ ಚಕ್ರವರ್ತಿತ್ವದ ಬೆಳೊಡೆಗೆ ಶೋಭೆ , ನೀನಿದ್ದರೆ ನನ್ನ ಸಿಂಹಾಸನ , ಪೀಳಿಗೆಗಳಿಗೆ ಮೆರಗು ನೀನಿಲ್ಲದೆ ಈ ಮೇಲಿನ ಎಲ್ಲವೂ ನನ್ನ ಪಾಲಿಗೆ ಇದ್ದೂ ಇಲ್ಲದಂತೆ ಅಂಗಾಧಿಪತಿ” ಎಂದು ದುರ್ಯೋಧನ ಹೇಳುವನು.ಅಂಗಾಧಿಪತೀ” ಎಂದು ದುರ್ಯೋಧನ ಹೇಳುವನು. ಅವನ ಈ ಮಾತುಗಳಲ್ಲಿ ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹ ಭಾವ, ಆದರ, ಗೌರವಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ವರ್ಣಿಸಲ್ಪಟ್ಟಿದೆ. ಎಲ್ಲ ಸುಖಕ್ಕಿಂತ ಸ್ನೇಹದಿಂದ ಸಿಗುವ ಸುಖ ಅತ್ಯಂತ ದೊಡ್ಡದು, ಬೆಲೆ ಕಟ್ಟಲಾಗದಂತಹದ್ದೆಂಬುದನ್ನು ಕವಿ ರನ್ನ ಸೊಗಸಾಗಿ ನಿರೂಪಿಸಿರುವನು.

ಶಬ್ದಾರ್ಥ: ಬೆಳ್ಕೊಡೆ (ಬೆಳ್+ಕೊಡೆ)-ಬಿಳಿಯಕೊಡೆ; ಪೀಟೆಗೆ-ಸಿಂಹಾಸನ. 

೧೫) ಹರಿ ಬೇಡ ಕವಚಮಂ ನೀ
ವರಿದಿತ್ತಯ್ ಕೊಂತಿ ಬೇಡೆ ಬೆಗಡದೆ ಕೊಟ್ಟಯ್
ಪುರಿಗಣೆಯಂ ನಿನಗಳ ಕಸ
ವರಿಗಲಿ ಮೆಯ್ದಲಿಯುಮಾವನಂಗಾಧಿಪತೀ

ಸಾವಿಗೆ ಕಾರಣನಾದ ಇಂದ್ರನ ಮಗ ಅರ್ಜುನನ ಮೇಲೆ ಕೋಪ ಉಕ್ಕಿ ಬಂದಿತು. ಆದರೂ ಮೊದಲು ಶರಶಯ್ಕೆಯಲ್ಲಿ ಮಲಗಿರುವ ಭೀಷ್ಮಾಚಾರರ ಚರಣಾರವಿಂದಗಳಿಗೆ ನಮಸ್ಕರಿಸಲೆಂದು ದುರ್ಯೊಧನ ಮುಂದೆ ಸಾಗಿದನು. ಶಬ್ದಾರ್ಥ: ಸಂಕ್ರಂದನ-ಇಂದ್ರ, ಶರಶಯನ-ಬಾಣದಮಂಚ; ನದೀನಂದನ- ಭೀಷ್ಮ (ಗಂಗೆಯ ಮಗ).

ಹೀಗೆ ಈ ದುರ್ಯೊಧನನು ತನ್ನ ಬಂಧುಬಾಂಧವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾಗಿ ದುಃಖತಪ್ತನಾಗಿ ರಣರಂಗವನ್ನು ಹಾದು ಹೋಗುವ ಚಿತ್ರಣವನ್ನು ಕವಿ ರನ್ನನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಶೋಕರಸವು ಇಲ್ಲಿ ಮಡುಗಟ್ಟಿ ನಿಂತಿದೆ ಎನ್ನಬಹುದು.

Conclusion

Duryodhana Vilapa is a powerful and moving poem that explores the complex human emotions of grief, remorse, anger, and acceptance. It is a classic of Kannada literature and a must-read for anyone interested in Indian culture and mythology.

Leave a Comment