Vachanagalu Summary in Kannada

Vachanagalu (also known as Vachanas) are a collection of religious poems written in Kannada by various saints and poets between the 11th and 15th centuries. Vachanagalu are known for their simple language, profound insights, and universal appeal. They deal with a wide range of topics, including spirituality, philosophy, social justice, and human relationships.

Vachanagalu Summary in Kannada

ವಚನಗಳ ಸಾರಾಂಶ/ಭಾವಾರ್ಥ:

೧) ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಹೊಡೆವವರೈವರೂ ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ,
ಅದರಿಚ್ಚೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.

ಅಲ್ಲಮಪ್ರಭುವು ಈ ಮೇಲಿನ ವಚನದಲ್ಲಿ ದೇಹವನ್ನು ಬಂಡಿಗೆ ಹೋಲಿಸಿದ್ದಾರೆ. ಬಂಡಿಗೆ ಹೋಲಿಸಿದ್ದಾರೆ. ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು. ಆದ್ದರಿಂದ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳೆಂದಿದ್ದಾರೆ. ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ.

ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ ಅಲ್ಲಮಪ್ರಭುಗಳು ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು. ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ, ಎಚ್ಚರದಿಂದ ನೋಡಿಕೊಳ್ಳಬೇಕು. ಅಲ್ಲಮಪ್ರಭುವು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ. ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು, ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು, ನೋಟ, ಸ್ಪರ್ಶ, ಶ್ರವಣ, ರುಚಿ, ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ. ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ. ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು. ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು. ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ, ಅವುಗಳೇ ದೇಹವೆಂಬ ಬಂಡಿಗೆ ಆಧಾರ.

ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು. ಹಾಗಾದಲ್ಲಿ ಆ ಬಂಡಿಯ ಅಚ್ಚು, ಎಂದರೆ ಆತ್ಮನಾಶವಾಗುತ್ತದೆ. ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ.

ಶಬ್ದಾರ್ಥ: ಐವರು ಮಾನಿಸರು-ಪಂಚೇಂದ್ರಿಯಗಳು; ಅಚ್ಚು-ಆಧಾರ ಭಾಗ.

೨) ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ
ಇಂತಪ್ಪವರ ಕಂಡಡೆ ನಾಚುವೆನಯ್ಯಾ, ಗುಹೇಶ್ವರಾ.

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ. ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನ೦ತೆ, ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ. ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬಾ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರತು, ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ? ಇಂಗಲಾರದು.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು, ಶಿವದಾರವನ್ನು ಮೈಮೇಲೆ ಧರಿಸಿದ್ದ ಮಾತ್ರಕ್ಕೆ ಅವನು ಶಿವಭಕ್ತನಾಗಿ ಬಿಡುವನ ? ಮಳೆಯ ಮೇಲೆ ಬಂಡೆ ಕಲ್ಲು ಬಿದ್ದಿರಲು ಅದು ಶಿವಲಿಂಗ, ಮಳೆಯೇ ಶಿವಭಕ್ತ ಕಲ್ಲನ್ನು ಮಳೆಯ ಮೇಲೆ ಎಸೆದಾತ ಗುರು ಎನ್ನಲಾಗದು. ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ. ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ, ಬಾಹ್ಯ ಪ್ರದರ್ಶನ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

ಶಬ್ದಾರ್ಥ: ಓಗರ-ಅನ್ನ: ಮೊಟ್ಟೆ-ಗಂಟು; ಸ್ವಾಯತ-ಧರಿಸುವಿಕೆ; ಮೆಳೆ-ಪೊದೆ.

೩) ನಾ ದೇವನಲ್ಲದೆ ನೀ ದೇವನೆ? 
ನೀ ದೇವನಾದಡೆ ಎನ್ನನೇಕೆ ಸಲಹೆ? 
ಆರೈದು ಒಂದು ಕುಡಿತೆ ಉದಕವನೆರೆವೆ, 
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾದೇವ ಕಾಣಾ, ಗುಹೇಶ್ವರಾ.

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂಪಾದಿಸಬಲ್ಲರು, ಜಗಳವಾಡಬಲ್ಲರು, ಸವಾಲು ಎಸೆಯಬಲ್ಲರು. ಈ ವಚನದಲ್ಲಿ ಅಲ್ಲಮನು ಪ್ರಭು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವ ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ. ನೀನು ದೇವರೇ ಆಗಿದ್ದರೆ ಏಕೆ. ಸಲಹುತ್ತಿಲ್ಲ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು, ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ.

ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ. ಸಲಹದ ನೀನು ದೇವರಲ್ಲ. ಸಲಹುವ ನಾನೇ ( ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ ) ದೇವರು ಎಂದಿದ್ದಾರೆ…..

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ. ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾ ಹಸಿವು, ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ. ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ಅಲ್ಲಮನ ಜೀವಪರವಾದ ಚಿಂತನೆ ಪ್ರಕಟವಾಗಿದೆ.

ಶಬ್ದಾರ್ಥ: ಆರೈದು-ಹುಡುಕಾಡಿ; ಕುಡಿತ-ಗುಟುಕು, ಬೊಗಸೆ, ಪದ್ಯದ ಭಾವಾರ್ಥ:

೧) ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ, ಗುಹೇಶ್ವರಾ.

ಹನ್ನೆರಡನೆಯ ಶತಮಾನದ ಬಹುಮುಖ್ಯ ವಚನಕಾರರಲ್ಲಿ ಒಬ್ಬರಾದ ಅಲ್ಲಮಪ್ರಭುಗಳು ರಚಿಸಿರುವ ವಚನವಿದು. ಪ್ರಭುವು ಇಲ್ಲಿ ಆಡಂಬರ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿರುವರಲ್ಲದೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಖಂಡಿಸಿರುವರು.

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡೆವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ. ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನಂತೆ, ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ. ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬಾ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರತು, ರುಚಿಯಾದ ಊಟದ ಪೊಟ್ಟಣವನ್ನುತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ? ಇಂಗಲಾರದು.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು, ಶಿವದಾರವನ್ನು ಮೈಮೇಲೆ ಧರಿಸಿದ ಮಾತ್ರಕ್ಕೆ ಅವನು ಶಿವಭಕ್ತನಾಗಿಬಿಡುವನೆ ? ಮಳೆಯ ಮೇಲೆ ಕಲ್ಲು ಬಿದ್ದಿರಲು ಅದು ಶಿವಲಿಂಗ, ಮಳೆಯೇ ಶಿವಭಕ್ತ, ಕಲ್ಲನ್ನು ಎಸೆದಾತ ಗುರು ಎನ್ನಲಾಗದು. ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮೆಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ. ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ, ಬಾಹ್ಯ ಪ್ರದರ್ಶನದ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

೨) ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾದೇವ ಕಾಣಾ, ಗುಹೇಶ್ವರಾ.

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂವಾದಿಸಬಲ್ಲರು, ಜಗಳವಾಡಬಲ್ಲರು, ಸವಾಲು ಎಸೆಯಬಲ್ಲರು. ಈ ವಚನದಲ್ಲಿ ಅಲ್ಲಮನು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವು, ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ.

ನೀನು ದೇವರೇ ಆಗಿದ್ದರೆ ಏಕೆ ಸಲಹುತ್ತಿಲ್ಲ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ. ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ. ಸಲಹದ ನೀನು ದೇವರಲ್ಲ. ಸಲಹುವ ನಾನೇ (ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ) ದೇವರು ಎಂದಿದ್ದಾನೆ.

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ. ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾದ ಹಸಿವು, ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ. ‘ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ’ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಲ್ಲಮನ ಜೀವಪರವಾದ ಚಿಂತನೆ ಇಲ್ಲಿ ಪ್ರಕಟವಾಗಿದೆ.

Conclusion

Vachanagalu are a unique and precious treasure of Kannada literature. They are a source of inspiration and guidance for people of all faiths and backgrounds. Vachanagalu teach us about the importance of compassion, equality, and social justice. They also teach us about the nature of reality and the path to spiritual liberation.

Leave a Comment