Devanolidana Kulave Sathkulam Summary in Kannada

“Devanolidana Kulave Sathkulam” is a Kannada poem written by Ranna in the 10th century. It is a part of the Shabdamanidarpana, a collection of poems on various topics. The poem is a reminder that caste is not a measure of a person’s worth, and that true nobility comes from following the path of righteousness.

Devanolidana Kulave Sathkulam Summary in Kannada

ಪದ್ಯಗಳ ಸಾರಾಂಶ/ಭಾವಾರ್ಥ:

ಹರಿಹರನು ರಚಿಸಿರುವ ಪ್ರಸ್ತುತ ರಗಳೆಯು ಶಿವಭಕ್ತನಾದ ಮಾದರ ಚೆನ್ನನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತದೆ. ಮಾದರ ಚೆನ್ನಯ್ಯ ಹನ್ನೆರಡನೆಯ ಶತಮಾನದ ಒಬ್ಬ ಪ್ರಮುಖ ವಚನಕಾರ. ಅವನು ಶಿವನಲ್ಲಿ ಹೊಂದಿದ್ದ ಭಕ್ತಿ ಅಪರೂಪದ್ದು. ಹರಿಹರನು ಮಾದರಚೆನ್ನನ ಭಕ್ತಿ ಭಾವವನ್ನು ತನ್ನ ಈ ರಗಳ ಹಿಡಿದಿಡುವ ಪ್ರಯತ್ನ ಮಾಡಿರುವನು.

೧) ಶ್ರೀಶಿವನ ಸೆಜ್ಜೆಯೆನಿಸುವ ಚೋಳದೇಶವದು
ಈಶಭಕ್ತವ್ರಜಕೆ ನಿಜಸುಖನಿವಾಸವದು
ಬೆಳೆಯಿಲ್ಲದಿಳೆಯಿಲ್ಲ ಬನವಿಲ್ಲದೂರಿಲ್ಲ 
ನೆಳಲ ತಂಪಿಲ್ಲದಾರವೆಯಿಲ್ಲದೆಡೆಯಿಲ್ಲ
ಕಾವೇರಿ ಸೋಂಕಿದರ ಪಾಪಮಂ ಸೋವೇರಿ
ಕಾವೇರಿ ಸಕಲ ಸಸ್ಯಾಳಿಯಂ ಕಾವೇರಿ
ಹರಿದಳಾ ದೇಶದೊಳು ಹರಭಕ್ತಿರಸದಂತೆ
ಧರಣೀತಳಕ್ಕಮೃತ ವಿಮಲವಾರಿಧಿಯಂತೆ 
ಇಂತಪ್ಪ ದೇಶಮಂ ಪಾಲಿಸುವ ಭೂಮಿಪಂ
ಸಂತತಂ ಕರಿಕಾಲ ಚೋಳನೆಂಬಾ ನೃಪಂ

ಹರಿಹರನು ಪದ್ಯದ ಆರಂಭದಲ್ಲಿ ಚೋಳದೇಶದ ವರ್ಣನೆಯನ್ನು ಮಾಡಿರುವನು. ನಾಡಿನ ವರ್ಣನೆಯಿಂದ ಪದ್ಯ ರಚಿಸುವುದು ಪಾರಂಪರಿಕ ಪದ್ಧತಿ. ಶಿವನ ನೆಲೆಮನೆಯೆಂಬಂತೆ ಚೋಳದೇಶವು ಕಂಗೊಳಿಸುತ್ತಿದ್ದಿತಂತೆ. ಶಿವಭಕ್ತರ ಸಮೂಹಕ್ಕೆ ಆ ನಾಡು ಸುಖದ ಬೀಡಾಗಿತ್ತು. ಎಲ್ಲೆಲ್ಲೂ ಸಮೃದ್ಧ ಬೆಳೆ ಕೊಡುವ ಫಲವತ್ತಾದ ಭೂಮಿ, ಹಸಿರು ಕಾಡು ತುಂಬಿ ನಿಂತ ಊರುಗಳು, ತಂಪೆರೆಯುವ ನೆಳಲನ್ನು ನೀಡುವ ಉದ್ಯಾನವನಗಳು ಶೋಭಿಸುತ್ತಿದ್ದವೆಂದು ಹರಿಹರ ವರ್ಣಿಸಿದ್ದಾನೆ. ಹರಭಕ್ತಿ ರಸವೇ ಹರಿಯುತ್ತಿದೆಯೇನೋ ಎಂಬಂತೆ ಪಾಪವನ್ನು ತೊಳೆಯುವ ಕಾವೇರಿ ಅಲ್ಲಿ ತುಂಬಿ ಹರಿಯುತ್ತಿದ್ದು ಸಕಲ ಸಸ್ಯಾವಳಿಗಳನ್ನು ಪೊರೆಯುತ್ತಿದ್ದಳಂತೆ.

ಕಾವೇರಿ ನದಿಯಿಂದಾಗಿ ಆ ನೆಲವು ಅಮೃತದ ಸಮುದ್ರವೆನಿಸಿದ್ದಿತು . ಇಂತಹ ಈ ಸುಂ ” ಕರಿಕಾಲ ಚೋಳ ” ನೆಂಬ ರಾಜನು ಆಳುತ್ತಿದ್ದನೆಂದು ಕವಿ ಹರಿಹರನು ವರ್ಣಿಸಿದ್ದಾನೆ.

ಶಬ್ದಾರ್ಥ: ಸೆಜ್ಜೆ-ಲಿಂಗವಸ್ತ್ರ, ನೆಲೆ, ಶಯನ, ವಜ-ಗುಂಪು, ಸಮೂಹ, ಆರವೆ (ಆರಮೆ)-ಉದ್ಯಾನ; ಕಾವೇರಿ (ಕಾವ+ಏರಿ)-ಕಾಪಾಡುವ ನೀರು; ಸೋವೇರಿ (ಸೋವ+ಏರಿ)-ಪಾಪ ನಿವಾರಿಸುವ ತೀರ್ಥ.

೨) ಆ ಚೋಳರಾಜನೊಪ್ಪುವ ರಾಜಧಾನಿಯೊಳು
ವಾಚಾಮಗೋಚರವದೆನಿಸಿದಂತವನಿಯೊಳು
ಜಾತಿ ಮಾದರ ಚೆನ್ನನೆಂಬ ನಾಮಂ ತನಗೆ
ಓತಿರ್ಪುದನ್ವರ್ಥವಾಗಿ ಮದುರ್ವರೆಗೆ
ಇರ್ದು ಶಂಕರನ ಗುಪ್ತಾರಾಧನೆಗೆ ನಚ್ಚಿ
ಸಾರ್ದು ಶಿವಭಕ್ತಿಯಂ ಬೀಜದಿಚ್ಚೆಗೆ ಮೆಚ್ಚಿ
ಭಕ್ತ ಚೋಳನ ತುರಂಗ ಬದುಕಬೇಕೆಂದು
ಯುಕ್ತಿಯಿಂ ಕಾಯಕಮನೆಡೆಗೊಂಡನೊಲಿದಂದು
ಕಂಪಣದ ಹುಲ್ಲಕಾಯಕವನೇ ಮರೆ ಮಾಡಿ
ಹಂಪಿಂದ ಶಿವನನರ್ಚಿಸುತಿಪ್ಪನೊಡಗೂಡಿ

ಆ ಚೋಳದೇಶದ ರಾಜಧಾನಿಯು ಕರಿಕಾಲ ಚೋಳನ ಆಳ್ವಿಕೆಯಲ್ಲಿ ವರ್ಣನೆಗೆ ನಿಲುಕದ ಭೂಮಿ ಎನಿಸಿದ್ದಿತು. ಈ ಊರಿನಲ್ಲಿ ಜಾತಿಯಲ್ಲಿ ಮಾದರ ಕುಲದವನಾದ ಚೆನ್ನನೆಂಬುವವನಿದ್ದನು. ಕುಲದ ನಾಮವೂ ಅನ್ವರ್ಥವಾಗುವಂತೆ ‘ಮಾದರ ಚೆನ್ನ’ನೆಂಬುದೇ ಅವನ ಹೆಸರಾಗಿತ್ತು. ಅವನೊಬ್ಬ ಮಹಾ ಶಿವಭಕ್ತನಾಗಿದ್ದನು. ಆದರೆ ಅವನ ಭಕ್ತಿಯು ಅಪ್ರಕಟಿತವಾದುದು. ಯಾರಿಗೂ ತಿಳಿಯದಂತಿತ್ತು. ಅವನೊಬ್ಬ ಗುಪ್ತಭಕ್ತನಾಗಿದ್ದನು.

ಕರಿಕಾಲಚೋಳ ರಾಜನ ಕುದುರೆಗೆ ಹುಲ್ಲನ್ನು ಕತ್ತರಿಸಿ ತಂದು ಹಾಕುವ, ಮೇವನ್ನು ಪೂರೈಸುವ ಕಾಯಕ ಮಾದರ ಚೆನ್ನನದಾಗಿತ್ತು. ಅವನು ಆ ಕಾರ್ಯ ಮಾಡುತ್ತಿದ್ದನಾದರೂ ಅದಕ್ಕಿಂತಲೂ ಮುಖ್ಯವಾಗಿ ಕಾಯಕದ ಜೊತೆಜೊತೆಗೇ ಶಿವನನ್ನು ಅರ್ಚಿಸಿ ಸಂತೋಷಪಡುತ್ತಿದ್ದನು. ಅವನ ವೃತ್ತಿ ಕುದುರೆಗೆ ಹುಲ್ಲು ತರುವುದಾದರೂ ಪ್ರವೃತ್ತಿ ಶಿವಭಕ್ತಿಯಾಗಿತ್ತು. ಅದರಲ್ಲೇ ಅವನಿಗೆ ಸರ್ವಸುಖ ಕಾಣುತ್ತಿತ್ತು.

ಶಬ್ದಾರ್ಥ: ವಾಚಾಮಗೋಚರ-ಮಾತಿಗೆ ನಿಲುಕದ; ಓತು-ಒಂದಾಗಿ, ಒಲಿದು; ಬೀದಿದ-ಪ್ರಕಟಗೊಳ್ಳದ; ಕಂಪಣ (ಕಂಪಣ-ಕವಳ)-ಮೇವು.

೩) ಒಳಗೆ ಭಕ್ತಿಯತಂಪು ಹೊದಿಗೆ ಜನ್ಮದ ಸೊಂಪು
ಒಳಗೆ ಮುಕ್ತಿಯಗುಂಪು ಹೊದಿಗೆ ಜಾತಿಯಹೆಂಪು
ತಿಲದ ತೈಲದ ತೆದೆ , ಕಾಷ್ಠದಗ್ನಿಯ ತೆರದೆ
ನೆಲದ ಮರೆಯೊಳಗೆ ತೊಳಗುವ ನಿಧಾನದ ತೆರೆದೆ
ಪೆರರರಿಯದಂತೊಳಗೆ ಲಿಂಗಾರ್ಚನೆಯಲಿಪ್ಪ
ಆ‌ರವಂತೆ ಹೊಳಿಗೆ ಕುಲಧರ್ಮಕರ್ಮದೊಳಿಪ್ಪ
ಉದಯ ಸಮಯದೊಳೆದ್ದು ಕಾಂತಾರದೊಳು ಪೊಕ್ಕು
ರಾಗದಿಂ ನಿರ್ಮಳನದೀತೀರದೊಳು ಪೊಕ್ಕು
ನುಣ್ಮಳಲ ದಿ೦ಟೆಯೊಳು ತಳಿರಹಸೆಯಲ್ಲಿ ಹಾಸಿ
ಕಣ್ಮನವನಭವನತ್ತಲು ನಿಲಿಸಿ ಕನ್ವಯಿಸಿ
ತಂದು ಸಿಂಹಾಸನದ ಮೇಲೆ ಬಿಜಯಂಗೆಯಿಸಿ

ಮಾದರ ಚೆನ್ನನ ಭಕ್ತಿಯ ಸೊಗಸುಗಾರಿಕೆಯನ್ನು ಕವಿ ಈ ಭಾಗದಲ್ಲಿ ವಿವರಿಸುತ್ತಿದ್ದಾನೆ. ಚೆನ್ನನು ಬಡವನಾದರೂ, ಅವನೊಳಗೆ ಭಕ್ತಿಯ ತಂಪು ಆವರಿಸಿತ್ತು. ಬದುಕಿನ ಸೊಗಸುಗಾರಿಕೆ, ಮನದೊಳಗೆ ಮುಕ್ತಿಭಾವದ ಸಮೂಹ, ಸಮಾಜದಲ್ಲಿ ಕೀಳು ಜಾತಿಯ ಗುರುತು ಇವೆಲ್ಲವೂ ಅಡಕವಾಗಿದ್ದ ಮಾದರ ಚೆನ್ನನ ಬದುಕು ವಿಶಿಷ್ಟವಾಗಿದ್ದಿತು. ಊರ ಜನರಿಗೆ ಅವನು ಜಾತಿಯಲ್ಲಿ ಕೆಳದರ್ಜೆಯ ಮಾದರ ಚೆನ್ನ ಮಾತ್ರ. ಆದರೆ ಅಂತರಂಗದಲ್ಲಿ ಅವನನ್ನು ಆವರಿಸಿದ್ದ ಶಿವಭಕ್ತಿ ಇತರರಿಗೆ ಗೋಚರಿಸುತ್ತಿರಲಿಲ್ಲ. ಎಳ್ಳಿನೊಳಗೆ ಅಡಕಗೊಂಡಿರುವ ತೈಲದಂತೆಯೂ, ಮರದೊಳಗೆ ಅಡಗಿಕೊಂಡಿರುವ ಬೆಂಕಿಯಂತೆಯೂ, ನೆಲದ ಅಡಿಯಲ್ಲಿ ಹುದುಗಿಕೊಂಡಿರುವ ನಿಧಿಯಂತೆಯೂ ಮಾದರ ಚೆನ್ನನ ಗುಪ್ತಭಕ್ತಿಯು ಇತರರಿಗೆ ಗೋಚರಿಸುತ್ತಿರಲಿಲ್ಲ. ಮನದೊಳಗೇ ಲಿಂಗಾರ್ಚನೆಗೈಯುತ್ತಿದ್ದ ಆತ, ಹೊರ ಜಗತ್ತಿಗೆ ಮಾತ್ರ ಕುಲಧರ್ಮವನ್ನು ಪಾಲಿಸುತ್ತಿರುವ ಕರ್ಮಯೋಗಿಯಂತಿದ್ದನು.

ಸೂರ್ಯೊದಯದ ಸಮಯದಲ್ಲಿ ಎದ್ದು, ಕಾಡಿಗೆ ತೆರಳುತ್ತಿದ್ದ ಮಾದರ ಚೆನ್ನನು ಅತ್ಯಂತ ಪ್ರೀತಿಯಿಂದ ನದೀತೀರದಲ್ಲಿ ನುಣ್ಣನೆಯ ಮರಳಿನ ಮೇಲೆ ಹಸಿರು ಪತ್ರಗಳನ್ನು ಹಾಡುತ್ತಿದ್ದನು. ಕಣ್ಣು-ಮನಸ್ಸು ಶಿವನಲ್ಲಿ ನೆಲೆಗೊಳಿಸಿ, ಕೈ ಬೀಸಿ ಕರೆದು ಶಿವನನ್ನು ಹಸಿರೆಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ  ಮಾಡುತ್ತಿದ್ದನೆಂದು ಕವಿಯು ವರ್ಣಿಸಿದ್ದಾನೆ.

ಶಬ್ದಾರ್ಥ: ಸೊಂಪು-ಸೊಗಸು; ತಿಲ-ಎಳ್ಳು; ಕಾಷ್ಠ-ಕಟ್ಟಿಗೆ; ನಿಧಾನ-ಸಂಪತ್ತು; ಕಾಂತಾರ-ಕಾಡು; ದಿಂಟೆ (ದಿಣ್ಣೆ)-ದಿಣ್ಣೆ; ಅಭವ-ಶಿವ.

೪) ಸಂದಣಿನ ದೇಹದಿಂದ ಪೂರಯಿ ಹಾರಯಿಸಿ
ಪರಿಮಳದ ತಿರುಳಪ ಮೊಲ್ಲೆ ಮಲ್ಲಿಗೆಗಳಿಂ
ಹರವರಿಯ ಕಂಪಿಡುವ ಸಂಪಗೆಯರ್ಗಳಿಂ
ಮರುಗ ದವನ ಪಚ್ಚೆ ಪಡ್ಡಳಿಯ ಪೂಗಳಿಂ
ಸುರಗಿ ಸುರಹೊನ್ನೆ ಚಂಗರಗಿಲೆಯ ಪೊಗಳಿo
ಸಂಗಡಿಸಿ ಸಿಂಪಡಿಸಿ ಹೋಗಿ ಹೊಲೆಯಯಿತು
ಲಿಂಗಪೂಜೆಗಳೊಳಗೆ ಮನವಿಟ್ಟು ಮಿರುತಂ
ಒಂದು ತೃಣಜಾಲಮಂ ಕೊಯತ್ತಿನೊಳು ಹೇಳಿ
ಸಂದ ಪ್ರಳಕಂಗಳಲ್ಲಿ ತನ್ನ ಮಯ್ಯೊಳು ಹೆರೆ

ಮಾದರ ಚೆನ್ನನು ಶಿವನಿಗೆ ಅತ್ಯಂತ ಸ್ನೇಹಭಾವದಿಂದ ಪರಿಮಳ ಬೀರುತ್ತಿರುವ ಮೊಲ್ಲೆ ಮಲ್ಲಿಗೆಗಳನ್ನು ಸಂಪಗೆ ಹೂಗಳನ್ನು, ಮರುಗ, ಪಚ್ಚೆ, ದವನ, ಕೆಂಪನೆಯ ಜಾಜಿ – ಹೀಗೆ ಬಗೆಬಗೆಯ ಹೂಗಳಿಂದ ಅಲಂಕರಿಸಿ ಅರ್ಚಿಸುತ್ತಿದನು. ಇವುಗಳ ಜೊತೆಗೆ ಸುರಗಿ, ಸುರಹೊನ್ನೆ ಕೆಂಪು ಕಣಗಿಲೆ ಹೂಗಳನ್ನು ತಂದು ಶಿವಲಿಂಗವನ್ನು ಸಿಂಗರಿಸುತ್ತಿದ್ದನು.

ಹೂಗಳ ಹೊರೆ ಯನ್ನೇ ಶಿವನ ಮೇಲೆ ಹೇರಿ ಮನವಿಟ್ಟು ಲಿಂಗಪೂಜೆಯನ್ನು ಮಾಡುತ್ತಿದ್ದನು. ಆ ನಂತರ ತನ್ನ ನಿತ್ಯ ಕಾಯಕದಂತೆ ಹುಲ್ಲನ್ನು ಕೊಯ್ದು, ಹೊರಗಟ್ಟಿ ಎತ್ತಿನ ಮೇಲೆ ಹೇರಿಕೊಂಡು ಮನದಲ್ಲಿ ಶಿವಪೂಜೆಯಿಂದ ಲಭಿಸಿದ ಆನಂದವನ್ನು ತುಂಬಿಕೊಂಡು ಹೊರಡುತ್ತಿದ್ದನು.

ಶಬ್ದಾರ್ಥ: ಹರವರಿ-ಹರವು, ವಿಸ್ತಾರ; ಹೊರೆಯೇಮಿ-ಉಬ್ಬು; ಪಚ್ಚಳಿಕೆಂಜಾಜಿ, ಪಾದರಿ.

೫) ನಡೆತಂದು ಚೋಳನ ತುರಂಗ ನಿಳಯದ ಮುಂದೆ
ತನೆಯವರ ಪಾದಿಯಲ್ಲಿ ನೂಕಿ ಭರದಿಂದೆ
ಬಳಲುತ ಬಂದು ನಿಜವಿಳಿಯದೊಳು ಕುಳ್ಳಿರ್ದ
ತೊಳತೊಳಿಪ ಶಿವಲಿಂಗದತ್ತ ಚಿತ್ತಂ ಸಾರ್ದು
ಇರೆ ಬೋನಮಂ ಪಿಡಿದರಲ್ಲಿ ತಮ್ಮರಸಿಯರು
ಹರನಿತ್ತುದಂ ಭಕ್ತಿಯಿಂದ ಕಡುಬಡವೆಯರು
ಲಿಂಗ ಪ್ರಸಾದಮಂ ಸಾದರಂ ಕಳ್ಕೊಂಡು
ಜ೦ಗಮನಿಭಾನನಿಪ್ಪಂ ಸುಖಮನೆಡೆಗೊಂಡು
ಈ ತೆಜದೊಳಯವತ್ತು ವತ್ಸರಂ ನಡೆವುತಿರ
ಭೂತಳದೊಳತಿಗುಪೂಂಜೆ ದಳವೇಜುತಿರ

ಹುಲ್ಲುಗಾವಲಿನಿಂದ ಹುಲ್ಲಹೊರೆಯನ್ನು ಹೊತ್ತುಕೊಂಡು ಬಂದ ಮಾದರ ಚೆನ್ನನು ಅದನ್ನು ಕರಿಕಾಲ ಚೋಳನ ಕುದುರೆ ಲಾಯದ ಮುಂದೆ ಹಾಕುತ್ತಿದ್ದನು. ನಂತರ ಬಳಲಿಕೆಯನ್ನು ಅನುಭವಿಸುತ್ತಾ ತನ್ನ ಮನೆಗೆ ಬಂದು ಕುಳಿತುಕೊಳ್ಳುವನು. ಕುಳಿತಾಕ್ಷಣ ಅವನ ಮನಸ್ಸು ತಳತಳನೆ ಹೊಳೆಯುತ್ತಿದ್ದ ಶಿವಲಿಂಗವನ್ನೇ ಧ್ಯಾನಿಸುತ್ತಿತ್ತು.

ಆ ಹೊತ್ತಿಗೆ ಮಾದರ ಚೆನ್ನನ ಪತ್ನಿಯು ಅವನಿಗೆ ಊಟಕ್ಕೆಂದು ತಂದುಕೊಟ್ಟ ಆಹಾರವನ್ನು ಶಿವಕೊಟ್ಟಿದ್ದೆಂಬ ಭಕ್ತಿಭಾವದೊಂದಿಗೆ, ಲಿಂಗಕ್ಕೆ ನೈವೇದ್ಯ ಮಾಡಿ, ಅದನ್ನೇ ಪ್ರಸಾದವೆಂದು ಜಂಗಮಧರ್ಮದಂತೆ ನೀಡುತ್ತಿದ್ದರು. ಕಡುಬಡತನ ಕಾಡುತ್ತಿದ್ದರೂ ಇರುವುದನ್ನೇ ದೇವರು ಕೊಟ್ಟಿದ್ದೆಂಬಂತೆ ಸ್ವೀಕರಿಸುವ ಈ

ದಂಪತಿಗಳು ಸುಖವಾಗಿಯೇ ಜೀವನವನ್ನು ನಡೆಸುತ್ತಿದ್ದರು. ಈ ರೀತಿಯಲ್ಲಿ ಅರುವತ್ತು ವರ್ಷಗಳ ಕಾಲ ಮಾದರ ಚೆನ್ನನು ಜೀವನವನ್ನು ಸಾಗಿಸಿದನಂತೆ. ಶಬ್ದಾರ್ಥ: ತುರಂಗ-ಕುದುರೆ; ಸಾದರ-ಆದರ; ವತ್ಸರ-ವರ್ಷ; ದಳವೇಮಿ- ಉತ್ಸಾಹ.

೬) ಹರನೊಲ್ದು ಚೆನ್ನನಂ ಮೆರೆವೆನೀ ಧರೆಗೆಂದು
ಪುರಹರಂ ಸಲೆ ಸಂತಸಂಬಡುತ್ತಿರಲೊಂದು
ದಿವಸದೊಳು ಎಂದಿನಂದದೊಳು ಹೊಲನಂ ಹೊಕ್ಕು
ಶಿವಲಿಂಗ ಪೂಜೆಯಂ ಮಾಡಿ ಹರುಷಂ ಮಿಕ್ಕು
ಬೇಗದಿಂ ಪುಲುಗೊಯ್ದು ಮೈಲನೊಳು ನೆರೆಹೆರೆ
ರಾಗದಿಂ ಗಳಗಳನೆ ನಡೆತರುತ್ತಂ ಮಿರೆ
ಕಂಪಣದ ತಾಣದೊಳು ಹುಲ್ಲನೊಲವಿಂ ನೂಂಕಿ
ಸೊಂಪೆರೆ ಚಿತ್ತಜಾರಿಯ ಚಿತ್ತಮಂ ಸೋಂಕಿ
ಮನೆಗೆ ಬ೦ದನುಮಿಸುತೆ ಕುಳ್ಳಿರ್ದು ನೆನೆವುತಿರೆ
ವನಿತೆ ತಂದ೦ಬಕಳಮಂ ಮೆಲ್ಲನೀವುತಿರೆ

ಮಾದರ ಚೆನ್ನನ ಭಕ್ತಿಯಿಂದ ಸಂತೋಷಗೊಂಡ ಶಿವನಿಗೆ ಮಾದರ ಚೆನ್ನನ ಗುಪ್ತಭಕ್ತಿಯ ವಿಚಾರವನ್ನು ಲೋಕಕ್ಕೆ ತಿಳಿಯುವಂತೆ ಮಾಡಬೇಕೆಂಬ ಮನಸ್ಸಾಯಿತು. ಒಂದು ದಿನ ಮಾದರ ಚೆನ್ನನು ಎಂದಿನಂತೆಯೇ ಹೊಲಕ್ಕೆ ಹೋಗಿ, ನಿತ್ಯದಂತೆ ಶಿವಲಿಂಗ ಪೂಜೆಯನ್ನು ಮಾಡಿ ಹರುಷಪಟ್ಟನು. ನಂತರ ಬೇಗಬೇಗ ಹುಲ್ಲನ್ನು ಕೊಯ್ದು, ಹೊರೆಯನ್ನು ಕಟ್ಟಿ ಹೊತ್ತುಕೊಂಡು ಪ್ರೀತಿಯಿಂದಲೇ ತನ್ನ ಕಾಯಕವನ್ನು ಮಾಡುತ್ತಾ ಕುದುರೆಗಳಿಗೆ ಮೇವನ್ನು ಹಾಕುವ ಸ್ಥಳದಲ್ಲಿ ಹುಲ್ಲಿನ ಹೊರೆಯನ್ನು ಹಾಕಿದನು. ಅವನ ಮನಸ್ಸಿನ ತುಂಬಾ ಶಿವನೇ ತುಂಬಿದ್ದನು. ಶಿವನನ್ನೇ ಧ್ಯಾನಿಸುತ್ತ ತನ್ನ ಮನೆಗೆ ಬಂದು ಕುಳಿತನು. ಕುಳಿತಲ್ಲಿಯೂ ಅವನ ಮನಸ್ಸು ಶಿವನನ್ನೇ ಸ್ಮರಿಸುತ್ತಿತ್ತು. ಆಗ ಅವನ ಹೆಂಡತಿಯು ಊಟಕ್ಕೆ ರಾಗಿಯ ಗಂಜಿ, ಅಂಬಲಿಯನ್ನು ನೀಡಿದಳು.

ಶಬ್ದಾರ್ಥ: ಮೈಲ (ಕಪ್ಪು)-ಬೂದುಬಣ್ಣದ ಎತ್ತು; ಅಂಬಕಳ-ಅಂಬಲಿ, ರಾಗಿಗಂಜಿ.

೭) ಮಧುರಾಮರುಚಿಯಾಹ ಶಿವಲಿಂಗವಂ ತಾಗ
ಸುಧೆಯ ಕಡುಸವಿಯಿಂದ ನೂರ್ಮಡಿಸಿ ಸವಿಯಾಗ
ಸವಿದು ದಣಿವೆಯ್ದಿಸದೆ ಗುರುಮೂರ್ತಿಯುರವಣಿಸಿ
ಸವಿಸವಿವುತಂಬಕಳವೆಲ್ಲವಂ ಲವಲವಿಸಿ
ಕೊಂಡನೇನೆಂಬೆನಾ ಚೆನ್ನನೊಡನೊಂದಾಗಿ
ಉಂಡನಭವಂ ಸ್ವರ್ಗಮರ್ತ್ಯಕ್ಕೆ ಪೊಸತಾಗಿ
ಇರೆ ನಿತ್ಯನೇಮಕ್ಕೆ ಚೋಳರಾಯಂ ಬಂದು
ಹರನಾಲಯ ೦ ಬೊಕ್ಕು ಕಯುಗಿವುತಂ ನಿಂದು
ದೇವಾನ್ನ ದಿವ್ಯಾನ್ನವಮೃತಾನ್ನಮಂ ಬಡಿಸಿ
ಓವಿ ಸವಿಸಾಲಿಡುವ ಶಾಕಂಗಳು ಬಡಿಸಿ

ಸವಿಯಾದ ಮಾವಿನ ಉಪ್ಪಿನಕಾಯಿಯ ಜೊತೆಗೆ ಅಂಬಲಿಯನ್ನು ಶಿವನು ಕುಡಿದು ಆನಂದಿಸುವನು. ಲೋಕಕ್ಕೆ ಇದು ಅಚ್ಚರಿಯ ಸಂಗತಿಯೆಂದು ಕವಿ ಬಣ್ಣಿಸಿರುವನು. ಅಮೃತದಂತಹ ರುಚಿಯ ಅಂಬಲಿಯ ಪರಿಮಳವು ಶಿವಲಿಂಗವನ್ನು ತಾಕಿತು. ಅಂಬಲಿಯ ಅತಿಯಾದ ರುಚಿಯಿಂದಾಗಿ ಶಿವನಿಗೆ ಅದನ್ನು ಸವಿಯುವ ಬಯಕೆ ನೂರಡಿಯಾಯಿತು.

ಅವನು ಮನಸಾರೆ ಅಂಬಲಿಯನ್ನು ಚನ್ನನೊಡಗೂಡಿ ಸವಿದನಂತೆ. ಇದು ಭೂಲೋಕವೂ, ಸ್ವರ್ಗಲೋಕವೂ ಅರಿಯದ ಹೊಸ ಸಂಗತಿಯೆಂಬುದಾಗಿ ಕವಿ ವಿವರಿಸಿದ್ದಾನೆ. ಭಕ್ತನೊಡನೆ ಆಹಾರ ಸ್ವೀಕರಿಸಿದ ದೇವನ ಸಂಗತಿ ಹೊಸತಲ್ಲದೆ ಬೇರೇನು? ಅಷ್ಟರಲ್ಲಿ ರಾಜನಾದ ಕರಿಕಾಲ ಚೋಳನು ತನ್ನ ದಿನನಿತ್ಯದ ಪದ್ಧತಿಯಂತೆ ಶಿವಾಲಯಕ್ಕೆ ಬಂದನು. ಬಂದವನೇ ಶಿವಲಿಂಗಕ್ಕೆ ಭಕ್ತಿಯಿಂದ ಕೈಮುಗಿದು, ಶಿವನಿಗೆ ನೈವೇದ್ಯವನ್ನು ಸಮರ್ಪಿಸಿದನು. ದೇವಲೋಕದ ದಿವ್ಯಾನ್ನವನ್ನು ಬಡಿಸಿ, ಉಪಚರಿಸಿದನು. ಹಲವು ಬಗೆಯ ಸವಿ ಸವಿಯ ಭಕ್ಷಗಳನ್ನು ರಾಜ ಶಿವನಿಗೆ ಬಡಿಸಲಾರಂಭಿಸಿದನೆಂದು ಕವಿ ವಿವರಿಸಿದ್ದಾನೆ. ಶಬ್ದಾರ್ಥ: ಆಮ್ರ-ಮಾವು; ಸುಧೆ-ಅಮೃತ; ಉರವಣಿಸಿ-ಉತ್ಸಾಹದಿಂದ; ಶಾಕ- ತರಕಾರಿ; ಓವಿ-ಉಪಚರಿಸು.

೮) ಪಪ್ಪಳಂ ಚಿಲುಪಾಲ ಘಟ್ಟಗಳನಲ್ಲಿ
ತುಪ್ಪಮಂ ಕೆನೆಮೊಸರ ಸಕ್ಕರೆಯನಲ್ಲಿ
ಬಿಡಿಸಿ ಹೆಜಸಾರುತಂ ಜವನಿಕೆಯನೋಸರಿಸಿ
ಮೃಡನೆ ಆರಯ್ಕೆಂದು ನಲವಿಂ ನಮಸ್ಕರಿಸಿ
ಹರನಲ್ಲಿ ಏನುವಂ ಮುಟ್ಟಿದಾರಯ್ಯದಿರೆ
ಪರಿಕಿಸದೆ ವಾಸಿಸದೆ ಲೆಕ್ಕಿಸದೆ ಸುಮ್ಮನಿರ
ತೊಟ್ಟಿನಾ ಜವನಿಕೆಯನೊಸರಿಸಿ ಕಾಣುತಂ
ಕಟ್ಟೆನಿಂತೇಕಾಯಿತೆನುತಲುರವಣಿಸುತಂ
ಕಿತ್ತಲಗುತ್ತಿಕೊಂಡಮ್ಮಮ್ಮ ಕೊರಳಲ್ಲಿ
ಒತ್ತಿ ಹೂಡುತ್ತಿರಲು ಶಂಕರಂ ಕಂಡಲ್ಲಿ

ಬಗೆ ಬಗೆಯ ಪದಾರ್ಥಗಳನ್ನು ನೈವೇದ್ಯಕ್ಕಿರಿಸಿದ ರಾಜನು ನಂತರ ಹಪ್ಪಳವನ್ನು ಬಡಿಸಿದನಂತೆ. ಕೆನೆ ಹಾಲು ತುಂಬಿದ ಮಣ್ಣಿನ ಕುಡಿಕೆಗಳನ್ನು ಇರಿಸಿದನಂತೆ. ಮಾತ್ರವಲ್ಲ, ತುಪ್ಪ, ಕೆನೆಮೊಸರು, ಸಕ್ಕರೆಯನ್ನೆಲ್ಲಾ ಬಡಿಸಿ ಹಿಂದಕ್ಕೆ ಸರಿದು ನಿಂತು, ಯಾರೂ ನೋಡಬಾರದೆಂದು ಪರದೆಯನ್ನು ಇಳಿಬಿಟ್ಟು ‘ಶಿವನೇ

ಸ್ವೀಕರಿಸು, ಸಮರ್ಪಿಸಿಕೋ’ ಎಂದು ಪ್ರೀತಿಯಿಂದ ನಮಸ್ಕರಿಸಿ, ಭಕ್ತಿಭಾವದಿಂದ ನಿಂತುಕೊಂಡನು. ಶಿವನು ಏನನ್ನೂ ಮುಟ್ಟಲಿಲ್ಲ.

ಅದನ್ನು ಪರೀಕ್ಷಿಸದೆ, ರುಚಿಯನ್ನು ನೋಡದೆ ಸುಮ್ಮನಿದ್ದನಂತೆ. ಪರದೆಯನ್ನು ಸರಿಸಿ ನೋಡಿ, ಇದೇಕೆ ಶಿವನು ಹೀಗೆ ಮಾಡಿದ? ಎಂದು ನೊಂದನು. ತಕ್ಷಣವೇ ಒರೆಯಲ್ಲಿದ್ದ ಕತ್ತಿಯನ್ನೆತ್ತಿಕೊಂಡು ತನ್ನ ಕೊರಳನ್ನು ಕತ್ತರಿಸಿಕೊಳ್ಳಲು ಒತ್ತಿಹಿಡಿದುದನ್ನು ಶಿವನು ನೋಡಿದನಂತೆ.

ಶಬ್ದಾರ್ಥ: ಚಿಲುಪಾಲು-ಕೆನೆಹಾಲು; ಘಟ್ಟ-ಮಣ್ಣಿನಪಾತ್ರೆ; ಹೆಸಾರು-ಹಿಂದೆ ಸರಿದು; ಜವನಿಕೆ-ಪರದೆ; ಅಲಗು-ಕತ್ತಿ

೯) ಓಹೋ ವಿಚಾರವಿಲ್ಲದೆ ಇಂತು ಮಾಕ್ಟರೇ
ಆಹ ನಿಮ್ಮರಸುತನವೆಯಲ್ಲಿ ಮಲ್ಪಾರೇ
ಕಂಡಯ್ಯ ಚೋಳ ನಿನಗಿನಿತು ಸ್ಮರಣೆಯಲ್ಲ
ಉಂಡವಾ ಚೆನ್ನನೊಡನಮಗಿಂದು ಹಸಿವಿಲ್ಲ
ಕೇಳಂಬಕಳದ ಸವಿಯದನೇನನೆಂಡೆಫೆಮ್
ಚೋಳಾದಿಗಳು ಪಡೆಯರೇನೆಂದು ಬಣ್ಣಿಪೆಂ
ಎಂದು ಶಿವನಾ ಲಿ೦ಗದೊಳು ಪುಗಲು ಕಾಣುತಂ
ನಿಂದು ಚೋಳಂ ಕೌತುಕಂ ಮಿಕ್ಕು ನೋಡುತಂ
ಬೆರಗಾಗಿ ಬೆಂಡಾಗಿ ಚೆನ್ನನಂ ಚಿಂತಿಸುತ
ಕಥೆಗೊರಳೊಂತುಂಬಲೇ ಎಂದು ಹುರುಡಿಸುತ

ಕರಿಕಾಲ ಚೋಳನ ಮುಂದೆ ಪ್ರತ್ಯಕ್ಷನಾದ ಶಿವನು “ಏನಯ್ಯಾ ಕರಿಕಾಲ ಚೋಳ ಸ್ವಲ್ಪವೂ ವಿಚಾರಮಾಡದೆ ಇಂತಹ ಕೆಲಸಕ್ಕೆ ಮುಂದಾಗುವುದೆ? ನನ್ನಲ್ಲಿಯೂ ನಿನ್ನ ಅರಸುಬುದ್ದಿಯನ್ನು ತೋರುತ್ತಿರುವೆಯಾ? ನಿನಗೆ ಸ್ವಲ್ಪವೂ ಸ್ಮರಣೆ- ಸಹಿಸಿಕೊಳ್ಳುವ, ತಾಳ್ಮೆಯ ಗುಣವಿಲ್ಲವಲ್ಲ. ಇಂದು ನನಗೆ ಹಸಿವಿಲ್ಲ. ಕಾರಣವೆಂದರೆ ನಾನಿಂದು ಚೆನ್ನನೊಡನೆ ಊಟ ಮಾಡಿದೆ. ಅವನೊಡನೆ ಸವಿದ ಅಂಬಲಿಯ ರುಚಿಯನ್ನು ಏನೆಂದು ಬಣ್ಣಿಸಲಿ?” ಎಂದು ಹೇಳುತ್ತಾ

ಶಿವಲಿಂಗದೊಳಗೆ ಐಕ್ಯನಾದನು. ಇದನ್ನು ಚೋಳ ರಾಜನು ಆಶ್ಚರದಿಂದ ನಿಂತು ನೋಡಿದನು. ಬೆಕ್ಕಸ ಬೆರಗಾಗಿ ನಿಂತ ಚೋಳರಾಜನು ಯಾರು ಈ ಚೆನ್ನ ಎಂದು ಚಿಂತಿಸುತ್ತಿದ್ದನು. ಅಂಬಲಿಯನ್ನು ಈ ರೀತಿ ಶಿವನುಂಡನೇ ಎಂದು ಹೊಟ್ಟೆಕಿಚ್ಚಾಯಿತಂತೆ.

ಶಬ್ದಾರ್ಥ: ಪಡಿ-ಸಮಾನ; ಕಳಗೊರಳ-ನೀಲಕಂಠ, ಹುರುಡು-ಪೈಪೋಟಿ, ಹೊಟ್ಟೆಕಿಚ್ಚು.

೧೦) ಪರಮಂಗೆ ಉಣಲಿತ್ತಶರಣನಂ ನೋಡುವೆಂ
ಹರುಷದಿಂದಾನವರ ಕರುಣಮಂ ಸೂಡುವಂ
ನಡೆದಜೆಯದಬ್ಬಸುಖಿ ಕಾಲ್ನಡೆಯೊಳೆಯ್ತರುತ
ಎಡಬಲದ ಮಕುಟವರ್ಧನರೊಡನೆ ನಡೆತರುತೆ
ಪುರಹರ ೦ ಗುಣಲಿತ್ತ ಚೆನ್ನನಂ ತೋದರೇ
ಗುರುಲಿಂಗದೊಡನುಂಡ ಚೆನ್ನನಂ ತೋಟೆರೇ
ಎಂದಲ್ಲಿ ಚಿತ್ತದನುತಾಪದಿಂ ಕೇಳುತಂ
ಅ ೦ ದಲ್ಲಿ ದೆಸೆದೆಸೆಗೆ ದೂತರಂ ಕಳುಪುತಂ
ಚೆನ್ನಯ್ಯನಿಪ್ಪ ಗುಡಿಲಿದೆಯೆಂದು ತೋರುತ್ತಿದೆ.
ಚೆನ್ನಯ್ಯನೊಳಗೈದನೆಂದು ನೆರೆಹೇಳುತಿರೆ

ಕರಿಕಾಲ ಚೋಳನಿಗೆ ಪರಶಿವನಿಗೆ ಊಟ ಮಾಡಿಸಿದ ಮಹಾಶಿವಶರಣನಾದ ಚೆನ್ನನನ್ನು ನೋಡಬೇಕೆನಿಸಿತು. ಅವನನ್ನು ನೋಡಿ ಪಾವನನಾಗಬೇಕೆಂದಾತ ಎಂದೂ ಬರಿಗಾಲಿನಲ್ಲಿ ನಡೆದು ಅರಿಯದವ ಅಂದು ನಡೆದುಕೊಂಡೇ ಹೊರಟನಂತೆ. ಅವನ ಎಡಬಲದಲ್ಲಿ ಅವನ ಪರಿವಾರವಿತ್ತು. ಸಿಕ್ಕವರನ್ನೆಲ್ಲಾ “ಶಿವಲಿಂಗದೊಡನೆ ಊಟ ಮಾಡಿದ ಚೆನ್ನನನ್ನು ತೋರುವಿರಾ?” ಎಂದು ಕೇಳುತ್ತಾ, ಮನದಲ್ಲೇ ಅನುತಾಪ ಮಾಡುತ್ತಾ, ಸಿಕ್ಕ ಸಿಕ್ಕ ಕಡೆ ಹುಡುಕುವಂತೆ, ತನ್ನ ದೂತರನ್ನು ಅಟ್ಟುತ್ತಾ ಬರುತ್ತಿರುವಾಗ, ‘ಇದೇ ಚೆನ್ನನ ಗುಡಿಸಲೆಂದೂ, ಚೆನ್ನ ಒಳಗಿರುವನೆಂದೂ’ ಚೆನ್ನನ ನೆರೆಮನೆಯವರು ರಾಜನಿಗೆ ಚೆನ್ನನ ಮನೆಯನ್ನು ತೋರಿದರು.

ಶಬ್ದಾರ್ಥ: ಸೂಡು-ತಲೆಯ ಮೇಲೆ ಧರಿಸು; ಅನುತಾಪ-ಸಂತಾಪ.

೧೧) ಒಳಗೆ ಚೆನ್ನಯ್ಯ ನೆರೆ ಕಂದುತಂ ಕುಂದುತ
ತಿಳಿವೊಡರಿದೇನೆಂದು ಕೋಡುತಂ ಬಾಡುತಂ
ಅರಮನೆಯ ಚಾರರೇಕಾನೇಕ ಶಂಕರಾ
ಆರಸನೇಶನ್ನ ಮನೆಯೇಕೆ ಶಶಿಶೇಖರಾ
ಭಕ್ತನೆಂದರಿಯದಿರ್ದೊಡೆ ಲೇಸು ಬದುಕುವೆಂ
ಭಕ್ತನೆಂದರಿದ ಬಳಿಕಾನೆಂತು ಬದುಕುವಂ
ಎನುತಮಿಠಲಲ್ಲಿ ಗುಡಿಲು ಸುತ್ತಿ ಮುತ್ತು
ತನತನಗೆ ಜಯ ಜೀಯ ಎನುತ ಕಯುಗಿವುತ್ತ
ಇರೆ ಚೋಳರಾಜನತಿ ಭಕ್ತಿಯಿಂದ ಬರುತಿರ್ದ
ನರರೆ ಸಮ್ಯಗ್‌ಜ್ಞಾನಿ ಸತ್ಯನಿಧಿ ಬರುತಿರ್ದ

ರಾಜನು ತನ್ನ ಪರಿವಾರದೊಡನೆ ತನ್ನ ಗುಡಿಸಲಿನ ಬಳಿಗೆ ಬರುತ್ತಿರುವುದನ್ನು ಕಂಡು ಮಾದರ ಚೆನ್ನನಿಗೆ ಅಳುಕಾಯಿತು. ದೊರೆಯೇಕೆ ಬರುತ್ತಿರುವನೆಂಬುದು ತಿಳಿಯದೆ ಮನದಲ್ಲೇ ಚಡಪಡಿಸುವಂತಾಯಿತು. ಮನಸ್ಸಿನಲ್ಲೇ ದೇವರಿಗೆ ಅರಮನೆಯಲ್ಲಿರ ಬೇಕಾದ ದೊರೆಯು ತನ್ನ ಗುಡಿಸಲಿಗೆ ಬರುತ್ತಿರುವುದೇಕೆ ಶಶಿಶೇಖರನೇ?” ಎಂದು ಚಿಂತಿಸುತ್ತಿದ್ದನು. ಚೆನ್ನನಿಗೆ ತಾನು ಶಿವನ ಭಕ್ತನೆಂಬ ವಿಚಾರ ಯಾರಿಗೂ ತಿಳಿಯದಿದ್ದರೆ ಸಾಕೆನಿಸಿತು.

ತಾನು ಭಕ್ತನೆಂಬ ವಿಚಾರವನ್ನು ಅವನು ಗೌಪ್ಯವಾಗಿರಿಸಿಕೊಂಡಿದ್ದನು. ಈಗ ತನ್ನ ಭಕ್ತಿಯ ವಿಚಾರ ಜಗತ್ತಿಗೆ ತಿಳಿದ ಮೇಲೆ ತಾನು ಬದುಕುವುದು ಹೇಗೆಂದು ಅವನು ಪರಿತಪಿಸಿದನು. ಹೀಗೆ ಚಿಂತಿಸುತ್ತಾ ತನ್ನ ಗುಡಿಸಲಿನ ಒಳಗೆಲ್ಲಾ ಶತಪಥ ತಿರುಗಾಡತೊಡಗಿದನು. ಮನದಲ್ಲೇ ಶಿವನಿಗೆ ಕೈಮುಗಿದು ‘ಕಾಪಾಡು ಸ್ವಾಮಿ, ತಂದೆ’ ಎಂದುಕೊಳ್ಳುತ್ತಿರುವಾಗ ಹೊರಗಡೆ ಜನರೆಲ್ಲ ಚೆನ್ನನಿಗೆ ಜಯಕಾರವನ್ನು ಮಾಡುತ್ತಿರಲು ಚೋಳರಾಜನು ಅತಿಭಕ್ತಿಭಾವದಿಂದ ಸಮ್ಯಗ್‌ಜ್ಞಾನಿಯಾದ ಸತ್ಯನಿಧಿ ಬರುವಂತೆ ಚೆನ್ನಯ್ಯನ ಗುಡಿಸಲಿನ ಸಮೀಪಕ್ಕೆ ಬಂದನು. 

ಶಬ್ದಾರ್ಥ: ಕೋಡು-ನಡುಗು; ಸಮ್ಯಗ್‌ಜ್ಞಾನಿ-ಸಂಪೂರ್ಣಜ್ಞಾನಿ.

೧೨) ಗಳಗಳನೆ ನಡೆತಂದು ಚೆನ್ನಯ್ಯನಂ ಕಂಡು
ಬಳಸಿ ಗಣಪದವಿ ಬಂದೆಳಸಿರ್ದನಂ ಕಂಡು
ಇಳಿಪಿದಂ ಸರ್ವಾಂಗಮಂ ಚೆನ್ನನಂತ್ರಿಯೊಳು 
ತೊಳತೊಳಗೆ ಮುಕುಟಮಣಿಕಾಂತಿ ಪದಭೂಮಿಯೊಳು 
ಪಾದರಜಮಂ ಕಣ್ಣಳೊಳಗೊತ್ತಿ ದಣಿವುತಿರೆ 
ಪಾದಮಂ ಬಲ್ವಿಡಿದು ಬಿಡೆನೆಂದು ಪೆಣಗುತಿರೆ 
ಏನಯ್ಯ ಚೋಳನೃಪ ನೀನಿಂತು ಬಪ್ಪರೇ 
ಭಾನುಕುಲದರ್ಪಣನೆ ನೀನಿಂತು ಮಾಕ್ಟರೇ 
ಎನ್ನ ಕುಲಮಂ ನೋಡದೆಯಪ್ಪರೇ ಚೋಳ 
ಎನ್ನ ಜಾತಿಯನರಿಯದಿಂತು ಮಾಕ್ಸರೆ ಚೋಳ

ಚೋಳರಾಜನು ಅವಸರವಸರವಾಗಿ ನಡೆದು ಬಂದವನೇ ಶಿವನ ಕೃಪೆಯಿಂದ ಗಣಪದವಿಯನ್ನು ಪಡೆದ ಮಾದರ ಚೆನ್ನನನ್ನು ಕಂಡೊಡನೆ ಅವನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಮಾತ್ರವಲ್ಲ ಚೆನ್ನನ ಪಾದಧೂಳಿಯನ್ನು ತನ್ನ ಕಣ್ಣುಗಳಿಗೆ ಭಕ್ತಿಯಿಂದ ಒತ್ತಿಕೊಂಡು ನಮಸ್ಕರಿಸಿದನು. ಚೆನ್ನನ ಪಾದಗಳನ್ನು ತನ್ನೆರಡೂ ಕೈಗಳಿಂದ ಬಲವಾಗಿ ಒತ್ತಿಹಿಡಿದುಕೊಂಡು ಪಾದಗಳನ್ನು ಬಿಡುವುದಿಲ್ಲವೆಂದನು. ಚೋಳರಾಜನು ಏಕಾಏಕಿ ಬಂದು ಹೀಗೆ ಮಾಡುತ್ತಿರುವುದರಿಂದ ಮಾದರ ಚೆನ್ನನಿಗೆ ತುಂಬಾ ಮುಜುಗರವಾಯಿತು.

ಅವನು ಚೋಳರಾಜನನ್ನು ಕುರಿತು “ಎಲೈ ಚೋಳ ರಾಜನೇ, ಸೂರಕುಲದಲ್ಲಿ ಜನಿಸಿರುವ ನೀನು ಕೀಳಾದ ಮಾದರ ಕುಲದಲ್ಲಿ ಜನಿಸಿರುವ ನನ್ನ ಗುಡಿಸಲಿಗೆ ಬರುವುದೇ? ನನ್ನ ಪಾದಗಳನ್ನು ಹಿಡಿಯುವುದೇ?” ಎಂದು ಪ್ರಶ್ನಿಸಿದನು. ಶಬ್ದಾರ್ಥ: ಅಂಫ್ರಿ-ಪಾದ; ರಜ-ಧೂಳು; ದರ್ಪಣ-ಕನ್ನಡಿ.

೧೩) ಎನೆ ದೇವದೇವನೊಲಿದನ ಕುಲವೇ ಸತ್ಕುಲಂ 
ಘನಮಹಿಮನೊಲಿದ ಜಾತಿಯೆಜಾತಿ ನಿರ್ಮಲಂ
ಸರ್ವನೊಡನುಂಡ ನಿಮ್ಮಯ ಜಾತಿಗಾಂ ಸರಿಯೆ
ಸರ್ವಜ್ಞ ನಿನ್ನ ಕೆರ್ಪಿಂಗೆನ್ನ ಶಿರಸರಿಯೆ
ಬಿಡೆನಯ್ಯ ನಿಮ್ಮಪದಮಂ ಬಿಟ್ಟು ಬಾಳ್ವೆನೇ 
ಮೃಡಮೂರ್ತಿಯಂ ಬಿಟ್ಟು ನರಕದೊಳಗಾಳೇನೇ 
ನಡೆಯಿಮೆಂದಲ್ಲಿ ಗಜಮಸ್ತಕವನೇ ಸುತ 
ಗುಡಿಗಟ್ಟಿ ಹೇಳೆಂದು ಪುರದೊಳಗೆ ಸಾಚಿಸುತೆ
ನಡೆತಂದು ಮೃಡನಾಲಯದ ಮುಂದೆ ನಿಂದಿರ್ದು 
ಕಡುನೇಹದಿಂ ಗಜದ ಮಗ್ಗುಲತ್ತಂ ಸಾರ್ದು

ಕೀಳುಕುಲದ ನನ್ನ ಮನೆಗೆ ರವಿಕುಲದರಸನಾದ ಚೋಳರಾಜನು ಆಗಮಿಸಿದ್ದನ್ನು ಚೆನ್ನನು ಪ್ರಶ್ನಿಸಿದ್ದಕ್ಕೆ ಉತ್ತರಿಸುತ್ತಾ ಚೋಳರಾಜನು, “ಎಲೈ ದೇವನೆ, ಶಿವನು ಒಲಿದವನ ಕುಲವೇ ಸತ್ಕುಲ, ನಿಜವಾದ ಶ್ರೇಷ್ಠ ಕುಲ, ಘನಮಹಿಮನಾದ ಶಿವನೊಲಿದವನ ಜಾತಿಯೇ ನಿರ್ಮಲವಾದ ಜಾತಿ. ಶಿವನ ಜೊತೆ ಊಟ ಮಾಡಿದ ನಿನಗೆ ನಾನು ಸರಿ ಸಮಾನನಲ್ಲ.

ಶಿವನನ್ನು ಒಲಿಸಿಕೊಂಡ ಸರ್ವಜ್ಞನಾದ ನಿನ್ನ ಚಪ್ಪಲಿಗಳಿಗೂ ನನ್ನ ಶಿರ ಸಮನಲ್ಲ. ಆದ್ದರಿಂದ ನಾನು ನಿನ್ನ ಪಾದಗಳನ್ನು ಬಿಟ್ಟು ಬದುಕುವುದಿಲ್ಲ, ಸಾಕ್ಷಾತ್ ಶಿವನ ಮೂರ್ತಿಯನ್ನು ಬಿಟ್ಟು ನಾನು ನರಕಕ್ಕೆ ಹೋಗಲೇ?” ಎಂದೆಲ್ಲಾ ಕೊಂಡಾಡಿದನು.

ಜೊತೆಗೆ ಮಾದರ ಚೆನ್ನನನ್ನು ಆನೆಯ ಮೇಲೆ ಕುಳ್ಳಿರಿಸಿಕೊಂಡು, ಮಾದರ ಚೆನ್ನನ ಕೀರ್ತಿಯನ್ನು ಹಾಡಿಹೊಗಳಿ, ಊರತುಂಬಾ ಅದನ್ನು ಸಾರುವಂತೆ ಆಜ್ಞಾಪಿಸಿದನು. ಶಿವನ ದೇವಾಲಯದ ಸಮೀಪಕ್ಕೆ ಬಂದನಂತರ ತಾನೇ ಅತಿಯಾದ ಸ್ನೇಹ ಭಾವದಿಂದ ಮಾದರ ಚನ್ನ ಕುಳಿತಿದ್‌ದ ಆನೆಯನ್ನು ಸಮೀಪಿಸಿದನು.

ಶಬ್ದಾರ್ಥ: ಕೆರ್ಪು-ಚಪ್ಪಲಿ; ಗುಡಿ-ಬಾವುಟ, ಧ್ವಜ, ತೋರಣ

೧೪) ಆನೆಯಿಂದಿಳಿಪಿ ಮೆಲ್ಲನೆ ಬಂದು ಕಬ್ಬೊಟ್ಟು 
ದಾನನಿಧಿ ಚೆನ್ನನಂ ಹರುಷದಿಂದ ಮುಂದಿಟ್ಟು
ಒಡಗೊಂಡು ಬಂದೊಳಗೆ ಶಿವಲಿಂಗಮಂ ತೋಟಿ
ಮೃಡನೊಡನೆ ತಾರ್ಕಣೆಗೊಡುತ್ತ ಚೋ ತೋ
ಕಂಡು ಚೆನ್ನಯ್ಯನಭವಂಗೆ ಕಡುಮುಳಿವುತಂ
ಕಂಡಯ್ಯ ಇಂತು ದೂಮಿವರೆ ನೀನನಗತಂ 
ಚೋಳನಿಂ ಪಿಡಿತರಿಸಿದೇಂ ತಪ್ಪಮಾಡಿದೆನೆ 
ಹೇಳಯ್ಯ ನಿನ್ನಲ್ಲಿ ಪದವಿಯಂ ಬೇಡಿದೆನೆ
ಅಳಿಯದಂಬಲಿಯನರ್ಪಿಸಿದೊಡೆಂತಿಯವರೆ
ಹೆಆಯ ಸೂಡಿದ ಶಿವನೆ ನೀನಿಂತು ದೂರುವರೆ

ಚೋಳರಾಜನು ಆನೆಯನ್ನು ಸಮೀಪಿಸಿ, ಸ್ನೇಹಭಾವದಿಂದ ತನ್ನ ಕೈ ನೀಡಿ ಮಾದರ ಚೆನ್ನನನ್ನು ಕೆಳಗಿಳಿಸಿಕೊಂಡನು. ಶಿವನನ್ನು ಒಲಿಸಿಕೊಂಡ ಚೆನ್ನನು ಅವನ ಪಾಲಿಗೆ ‘ದಾನ ನಿಧಿ’ಯಂತಿದ್ದನು. ಚೆನ್ನನನ್ನು ಮುಂದಿಟ್ಟುಕೊಂಡು ಶಿವಾಲಯವನ್ನು ಪ್ರವೇಶಿಸಿದ ಚೋಳನು, ಚೆನ್ನನನ್ನು ಶಿವಲಿಂಗದ ಮುಂದೆ ಕರೆತಂದು ತನ್ನ ನೈವೇದ್ಯವನ್ನು ಸ್ವೀಕರಿಸದಿರುವುದನ್ನು ನಡೆದ ಘಟನೆಯ ವಿವರಗಳನ್ನು ಸಾಕ್ಷಿಸಮೇತ ಚೆನ್ನನಿಗೆ ತೋರಿದನು.

ತನ್ನ ಗುಪ್ತಭಕ್ತಿಯನ್ನು ಬಯಲು ಮಾಡಿದ ಶಿವನ ಮೇಲೆ ಮಾದರ ಚೆನ್ನನಿಗೆ ಕೋಪವುಂಟಾಯಿತು. ಅವನು ಶಿವನನ್ನು ದೂರುತ್ತಾ “ಎಲೈ ಶಿವನೆ, ನೀನು ಹೀಗೆ ಮಾಡಿದ್ದು ಸರಿಯೆ? ಚೋಳನಿಂದ ನನ್ನನ್ನು ಹಿಡಿದು ತರುವಂತಹ ತಪ್ಪು ನಾನೇನು ಮಾಡಿದೆ?ನಾನು ಗಣಪದವಿಯನ್ನು ನೀಡೆಂದು ಬೇಡಿಕೊಂಡೆನೇ? ಅರಿಯದೆ ನಾನು ಅಂಬಲಿಯನ್ನು ನಿನಗೆ ಅರ್ಪಿಸಿದ್ದಕ್ಕೆ ಹೀಗೆ ಮಾಡಿದೆಯಾ? ಚಂದ್ರಶೇಖರನೇ, ನೀನು ಮಾಡಿದ್ದು ತರವೇ?” ಚೆನ್ನನು ಶಿವನನ್ನು ಆಕ್ಷೇಪಿಸಿದನು. ತನ್ನ ಭಕ್ತಿಯನ್ನು ಬಯಲು ಮಾಡಿದ ಶಿವನ ಮೇಲೆ ಚೆನ್ನನಿಗೆ ಮುನಿಸುಂಟಾಯಿತು.

ಶಬ್ದಾರ್ಥ: ತಾರ್ಕಣೆ-ಪ್ರತ್ಯಕ್ಷವಾದ, ಋಜುವಾತು; ಹೆಟಿ-ಚಂದ್ರ.

೧೫) ಮೇದಿನಿಗೆ ಬೀದಿಗಖವಾದುದೆನ್ನಯ ಭಕ್ತಿ 
ವಾದೇಕೆ ಹರಲೆಯನು ತಂದಿಕ್ಕಿ ಭಕ್ತಿ
ಇಳೆಯೊಳಿರೆನೆನುತಲತಿ ಭಾಷೆಯಂ ಮಾಡೆ
ಚೆನ್ನಯ್ಯನಿರದಲಗ ಕಿತ್ತು ಕೊರಳೊಳುಹೂಡೆ
ಶಿವಲಿಂಗದಿಂದ ಶಿವನೆಯ್ತಂದು ನೆಟ್‌ಪಿಡಿದು
ಅವಿಚಾರದಿಂದಿತು ಮಾಕ್ಸರೇ ನೀನದು
ಮರೆದು ಚೋಳಂಗೆ ಪೇಳ್ಕೊಳ್ಕೊಡೆ ಕೋಪವಿನಿತೇ 
ಅಳಿಯದೆಂದೆವು ಚೆನ್ನಸೈರಿಸಾತುರವೇಕೆ 
 ಎಂದು ಮೃಡಮೂರ್ತಿ ಚೆನ್ನಂಗೆ ನೇಹಮನೆಂದು
ನಿಂದು ಚೋಳಂಗೆ ಚೆನ್ನನ ತೋಯಿತಂ ನುಡಿದು

ತನ್ನ ಗುಪ್ತ ಭಕ್ತಿಯು ಜಗತ್ತಿಗೆ ತಿಳಿಯಿತಲ್ಲಾ ಎಂದು ಚೆನ್ನನು ಮರುಗಿದನು. ಭೂಮಿಯಲ್ಲಿ ತನ್ನ ಗುಪ್ತಭಕ್ತಿ ಬೀದಿಗೆ ಬಿದ್ದು ಬಯಲಾಯಿತಲ್ಲಾ, ತಾನು ಶಿವಭಕ್ತನೆಂಬುದು ಜಗತ್ತಿಗೆ ತಿಳಿಯಿತಲ್ಲಾ, ಇನ್ನು ಈ ಭೂಮಿಯ ಮೇಲೆ ತಾನು ಬದುಕಿರುವುದಿಲ್ಲವೆಂದು ಮಾದರ ಚೆನ್ನನು ಆಣೆ ಮಾಡಿದನು. ಮಾತ್ರವಲ್ಲ ಆ ಕ್ಷಣವೇ ತನ್ನ ಕೊರಳನ್ನು ಕತ್ತರಿಸಿಕೊಳ್ಳಲು ಕತ್ತಿಯನ್ನೆತ್ತಿಕೊಂಡು ಕೊರಳಿಗೆ ಒತ್ತಿದನು.

ತಕ್ಷಣವೇ ಶಿವಲಿಂಗದಿಂದ ಪ್ರತ್ಯಕ್ಷನಾಗಿ ಹೊರಬಂದ ಶಿವನು ಚೆನ್ನನನ್ನು ತಡೆಯುತ್ತಾ “ಎಲೈ ಭಕ್ತನೇ, ವಿಚಾರ ಮಾಡದೆ ಎಂತಹ ಕೆಲಸಕ್ಕೆ ಕೈ ಹಾಕುತ್ತಿರುವೆ? ನಿನ್ನ ಭಕ್ತಿಯ ವಿಚಾರವನ್ನು ಚೋಳನಿಗೆ ತಿಳಿಸಿದ್ದಕ್ಕೆ ಇಷ್ಟೊಂದು ಕೋಪವೇಕೆ?” ಎಂದು ಸಮಾಧಾನಪಡಿಸಿದನು. ಅಲ್ಲದೆ ಮಾದರ ಚೆನ್ನನನ್ನು ಚೋಳನಿಗೆ ತೋರುತ್ತಾ ಶಿವನು ಈ ಮುಂದಿನ ಮಾತುಗಳನ್ನಾಡಿದನು. ಶಬ್ದಾರ್ಥ: ಬೀದಿಗಲ-ಬಯಲಾಗು; ಹರಲೆ-ವೃಥಾಪವಾದ.

೧೬) ನೋಡಯ್ಯ ಚೋಳ ಗುಪ್ತಾರ್ಚನೆಯ ಮೋನಿಯಂ 
ಆಡಂಬರವನಳಿದ ಲಿಂಗಾಭಿಮಾನಿಯಂ
ಎಂದು ಕೊಂಡಾಡುತಿರೆ ಹೂಮಳೆಗಳಆಗಿದವು
ನಿಂದು ದುಂದುಭಿಕುಳಂ ಗಗನದೊಳು ಮೊಳಗಿದವು
ಬಂದ ಪುಷ್ಪಕದೊಳಗೆ ಚೆನೈನಂ ಕುಳ್ಳಿರಿಸಿ 
ಇಂದುಧರನಾನಂದದಿಂದೊಲಿದು ಸಡಗರಿಸಿ 
ಕೈಲಾಸಮಂ ಪೊಕ್ಕು ಸಿಂಹಾಸನಮನೇಲೆ 
ಶೈಲಜೆಗೆ ಚೆನ್ನನಂ ಸಂತೋಷದಿಂ ತೊಆ ಚೆನ್ನಂಗೆ 
ಗಣಪದವಿಯಂ ಕೊಟ್ಟು ರಾಗದಿಂ
ಪನ್ನಗಾಭರಣನೊಪ್ಪಿದನಖಿಳಯೋಗದಿಂ

“ನೋಡಯ್ಯ ಚೋಳನೇ, ಗುಪ್ತರೀತಿಯಲ್ಲಿ ಪೂಜಿಸುತ್ತಾ ಮೌನಿಯಾಗಿದ್ದ ಈ ಚೆನ್ನನನ್ನು ಯಾವುದೇ ಆಡಂಬರದ ಪೂಜೆಪುನಸ್ಕಾರ ಮಾಡದೆ, ಸರಳವಾದ ರೀತಿಯಲ್ಲಿ ಲಿಂಗಾಭಿಮಾನಿಯಾಗಿದ್ದವನೀತ’ ಎಂದು ಶಿವನು ಚೆನ್ನನನ್ನು ಹೊಗಳಿ ಕೊಂಡಾಡಿದನು. ಆಗ ದೇವತೆಗಳು ಆಕಾಶದಿಂದ ಹೂಮಳೆಯನ್ನು ಸುರಿಸಿದರು. ಆಕಾಶದಲ್ಲಿ ದುಂದುಭಿ ನಾದ ಮೊಳಗಿತು. ದೇವಲೋಕದಿಂದ ಒಂದು ಪುಷ್ಪಕ ವಿಮಾನ ಆಗಮಿಸಿತು. ಶಿವನು ಚೆನ್ನನನ್ನು ತನ್ನೊಡನೆ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿಕೊಂಡು ಕೈಲಾಸಕ್ಕೆ ಕರೆತಂದನು. ತನ್ನ ಅರ್ಧಾಂಗಿಯಾದ ಪಾರ್ವತಿಗೆ ಚೆನ್ನನನ್ನು ಸಂತೋಷದಿಂದ ತೋರಿಸಿದನು. ಚೆನ್ನನಿಗೆ ಸಂತೋಷದಿಂದ ‘ಗಣಪದವಿ’ಯನ್ನಿತ್ತು ಸರ್ಪಭೂಷಣನಾದ ಶಿವನು ಸಂತೋಷದಿಂದ ತನ್ನ ಸಿಂಹಾಸನದಲ್ಲಿ ಆರೂಢನಾದನು. ಹೀಗೆ ಮಾದರ ಚೆನ್ನನ ಗುಪ್ತಭಕ್ತಿಯು ಅವನಿಗೆ ಶಿವಗಣ ಪದವಿಯನ್ನು ತಂದಿತ್ತು, ಸರಳಭಕ್ತಿಯನ್ನು ಚಿರಗೊಳಿಸಿತು. ಶಬ್ದಾರ್ಥ: ಮೋನಿ-ಮೌನಿ.

Conclusion

“Devanolidana Kulave Sathkulam” is a timeless poem that continues to be relevant today. It is a powerful reminder that we should judge each other based on our character and actions, not on our caste or any other external factor.

Leave a Comment