In the heart of the quaint village of Halubidal, nestled amidst the lush greenery and the gentle whispers of the Karaguvante, a tale unfolds that resonates with the deepest emotions of the human soul. This is a story that weaves together the threads of love, sacrifice, and the indomitable spirit of a community bound by tradition. Join us as we embark on a journey through the pages of “Halubidal Kalmaram Karaguvante,” a story that will touch your heart and leave you with a profound sense of wonder.
Halubidal Kalmaram Karaguvante Summary in Kannada
ವೈಶಂಪಾಯನರೆಂಬ ಮಹಾಮುನಿಗಳು ಜನಮೇಜಯ ಮಹಾರಾಜನಿಗೆ ಸೀತಾ ಪರಿತ್ಯಾಗದ ಕಥೆಯನ್ನು ಹೇಳು ತಿರುತ್ತಾರೆ.
೧) ಅರಸ ಕೇಳೋಮಿತಿ ವೈದೇಹಿಯಂ ಕೊಂಡು
ತೆರಳುವ ರಥಾಗ್ರದೊಳ್ಳಲಿಸುವ ಪತಾಕೆ ರಘು
ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡಹುವಂತಿ
ಪರಮದಾರುಣಮಾಡ್ತಿದೆಂದಯೋಧ್ಯಾಪುರದ
ನೆರವಿಯ ಜನಂ ಗುಜುಗುಜಿಸಿ ಮನದಿ ಕರಗಿ ಕಾ
ತರಿಸುತಿರೆ ಪರಿಸಿದಂ ಕಾಳಟೈಗೊಂಡನಿಲವೇಗದಿಂದಾ ರಥವನು
ಎಲೆ ಜನಮೇಜಯ ರಾಜನೇ ಕೇಳು, ತನ್ನ ಅಣ್ಣನಾದ ಶ್ರೀರಾಮನ ಆಜ್ಞೆಯಂತೆ ಸುಮಿತ್ರೆಯ ಮಗನಾದ ಲಕ್ಷಣನು ಸೀತೆಯನ್ನು ಕಾಡಿಗೆ ಕರೆದುಕೊಂಡು ಹೊರಟನು. ಅವರು ಪ್ರಯಾಣಿಸುತ್ತಿದ್ದ ರಥದ ಮ ಲಿದ್ದ ಪತಾಕೆಯು ಅತ್ತಿತ್ತ ಹೊಯ್ದಾಡುತ್ತಿದ್ದುದು, ಯಾವ ತಪ್ಪನ್ನೂ ಮಾಡದ ಸೀತಾದೇವಿಯನ್ನು ಅರಣ್ಯಕ್ಕೆ ಕಳುಹಿಸುವ ಶ್ರೀರಾಮನ ನಿರ್ಧಾರ ಸರಿಯಲ್ಲವೆಂದು ತಲೆಯನ್ನು ಅಲ್ಲಾಡಿಸಿದಂತೆ ಕಾಣುತ್ತಿತ್ತೆಂದು ಕವಿಯು ಚಿತ್ರಿಸಿದ್ದಾನೆ. ಸೀತೆಯನ್ನು ಶ್ರೀರಾಮನು ಕಾಡಿಗೆ ಕಳುಹಿಸುತ್ತಿರುವುದನ್ನು ತಿಳಿದ ಅಯೋಧ್ಯೆಯ ಜನರು ”ಇದು ಪರಮ ಶೌರ್ಯ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು, ಮನಸ್ಸಿನಲ್ಲಿಯೇ ನೊಂದುಕೊಂಡರಂತೆ. ಆದರೆ ಲಕ್ಷ್ಮಣನು ಕಲ್ಲಿನ ಹಾದಿಯಲ್ಲಿ ರಥವನ್ನು ವಾಯುವೇಗದಲ್ಲಿ ಓಡಿಸಿಕೊಂಡು ಅಲ್ಲಿಂದ ಹೊರಟೇಬಿಟ್ಟನೆಂದು ಕವಿಯು ವಿವರಿಸಿದ್ದಾನೆ.
ಶಬ್ದಾರ್ಥ: ಸೌಮಿತ್ರಿ-ಲಕ್ಷಣ; ಪತಾಕೆ-ಬಾವುಟ, ಧ್ವಜ ನೆರವಿ-ಗುಂಪು; ಪರಿಸು- ಮುನ್ನಡೆಸು; ಕಾನ್ಸಟ್ಟೆ-ಕಾಡು ದಾರಿ.
೨) ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು
ಬಳಿಕ ನಾವಿಕರೊಡನೆ ನಾವದೊಳಂಗೆಯಂ
ಕಳೆದು ನಿರ್ಮಲ ತೀರ್ಥದೊಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುವ ಮುಂ
ದಳದುಗ್ರ ಮೃಗ ಪಕ್ಷಿಗಣದಿಂದ ಭೂರ್ಮಿಸುವ
ಹಳುವಮಂ ಪೊಕ್ಕನಡಿಯಿಡುವೊಡಸದಳಮಂಬ ಕರ್ಕಶದ ಮಾರ್ಗದಿಂದ
ಅಯೋಧ್ಯೆಯಿಂದ ವಾಯುವೇಗದಲ್ಲಿ ರಥವನ್ನು ಓಡಿಸಿಕೊಂಡು ಬಂದ ಲಕ್ಷಣನು ಗಂಗಾನದಿಯನ್ನು ಸಮೀಪಿಸುವನು. ಸೀತಾ-ಲಕ್ಷ್ಮಣರಿಬ್ಬರೂ ಗಂಗಾನದಿಯನ್ನು ದಾಟಿ ಮುನ್ನಡೆದುದನ್ನು ಕವಿಯು ಈ ಪದ್ಯದಲ್ಲಿ ವರ್ಣಿಸಿದ್ದಾನೆ. ಗಂಗಾನದಿಯ ಬಳಿ ರಥದಿಂದ ಕೆಳಗಿಳಿದ ಸೀತಾಲಕ್ಷ್ಮಣರುಗಂಗೆಗೆ ನಮಸ್ಕರಿಸಿದರು. ನಿರ್ಮಲವಾದಗಂಗೆಯಲ್ಲಿ ಸ್ನಾನವನ್ನು ಮಾಡಿದರು. ಅನಂತರ ದೋಣಿಯನ್ನು ನಡೆಸುವ ನಾವಿಕರ ಸಹಾಯದಿಂದ ದೋಣಿಯಲ್ಲಿ ಕುಳಿತು ಗಂಗೆಯನ್ನು ದಾಟಿದರು. ಲಕ್ಷಣನು ಘೋರವಾದ ಅರಣ್ಯದಲ್ಲಿ ಸೀತೆಯನ್ನು ಏಕಾಂಗಿಯಾಗಿ ಬಿಟ್ಟು ಹೋಗಬೇಕಲ್ಲಾ ಎಂದು, ಅವಳ ಮುಂದಿನ ಸ್ಥಿತಿಯನ್ನು ಯೋಚಿಸಿ ಮನದಲ್ಲೇ ತುಂಬಾ ಸಂಕಟಪಡುತ್ತಿದ್ದನಂತೆ. ಕಾಲಿಡಲು ಸಾಧ್ಯವೇ ಇಲ್ಲವೆಂಬಂತಹ ಘನ-ಘೋರ ಅರಣ್ಯವದು. ಭೀಕರವಾದ ಪ್ರಾಣಿ- ಪಕ್ಷಿಗಳಿಂದ ಜೀಗುಡುತ್ತಿದ್ದ ಅರಣ್ಯವನ್ನು ಲಕ್ಷಣನು ಸೀತೆಯೊಡನೆ ಪ್ರವೇಶಿಸಿದನು.
ಶಬ್ದಾರ್ಥ: ಮಂದಾಕಿನಿ-ಗಂಗಾನದಿ; ಪೊಡಮಡು-ನಮಸ್ಕರಿಸು; ನಾವೆ-ದೋಣಿ; ಭೂರ್ಮಿಸು-ಗರ್ಜಿಸು; ಹಳುಕಾಡು; ಕರ್ಕಶದ ಮಾರ್ಗ-ಕಠಿಣವಾದ ದಾರಿ.
೩) ಇರುಳಂತೆ ಪಗಲಂತೆ ಮಖದಂತೆ ದಿವದಂತೆ
ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ
ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವಾವಾಸವಾಗಿ
ಧುರದಂತೆ ಕೊಳದಂತೆ ಕಡಲಂತೆ ನಭದಂತೆ
ಶರಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ
ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಣೆ ಘೋರತರವಾಗಿ ಮುಂದೆ
ಗರ್ಭಿಣಿಯಾದ ಸೀತೆಯು ಲಕ್ಷ್ಮಣನ ಜೊತೆಗೂಡಿ ಭೀಕರವಾದ ಅರಣ್ಯವನ್ನು ಪ್ರವೇಶಿಸಿದಾಗ ಅವಳ ಕಣ್ಣಿಗೆ ಅರಣ್ಯವು ಹೇಗೆ ಕಂಡಿತೆಂಬುದನ್ನು ಇಲ್ಲಿ ಕವಿಯು ವಿವರಿಸಿರುವನು. ಇದೊಂದು ವಿಶಿಷ್ಟ ಪದ್ಯವಾಗಿದ್ದು ಒಂದು ಪದಕ್ಕೆ ಇರುವ ನಾನಾರ್ಥಗಳನ್ನು ಬಳಸಿಕೊಂಡು ಕವಿಯು ಬಹಳ ಚಮತ್ಕಾರವಾಗಿ ಇದನ್ನು ರಚಿಸಿದ್ದಾನೆ. ಮೊದಲ ಎರಡು ಸಾಲುಗಳಲ್ಲಿಯ ಪದಗಳಿಗೆ ಮೂರನೇ ಸಾಲಿನ ಪದಗಳನ್ನೂ ಮತ್ತು ನಾಲ್ಕು, ಐದನೇ ಸಾಲುಗಳಿಗೆ ಆರನೇ ಸಾಲಿನ ಪದಗಳನ್ನೂ ಅನ್ವಯ ಮಾಡಿಕೊಂಡಾಗ ಮಾತ್ರ ಈ ಪದ್ಯ ಸರಿಯಾಗಿ ಅರ್ಥ ವಾಗುತ್ತದೆ. ಇರುಳಿನಲ್ಲಿ ಸೋಮ (ಚಂದ್ರ) ಕಾಣುತ್ತಾನೆ. ಹಾಗೆಯೇ ಆ ಕಾಡಿನಲ್ಲೂ ಸೋಮ (ಎಂಬ ಹೆಸರಿನ ಬಳ್ಳಿ) ಇದ್ದಿತು. ಹಗಲಿನಲ್ಲಿ ಅರ್ಕ(ಸೂರನಿರುತ್ತಾನೆ. ಅಂತೆಯೇ ಆ ಕಾಡಿನಲ್ಲೂ ಅರ್ಕ (ಎಕ್ಕದ ಗಿಡ)ವಿತ್ತು. ಯಜ್ಞದಲ್ಲಿ ಶಿಖಿ (ಅಗ್ನಿ ಇರುತ್ತದೆ. ಅದೇ ರೀತಿ ಕಾಡಿನಲ್ಲೂ ಶಿಖಿ (ನವಿಲು) ಇತ್ತು. ಸ್ವರ್ಗದಲ್ಲಿ ಸಹಸ್ರಾಕ್ಷ(ಇಂದ್ರ)ನಿರುತ್ತಾನೆ. ಕಾಡಿನಲ್ಲೂ ಸಹಸ್ರಾಕ್ಷ (ನವಿಲು) ಇರುತ್ತದೆ. ಹಾಲಿನ ಸಮುದ್ರದಲ್ಲಿ ಹರಿ(ವಿಷ್ಣು)ವಿರುತ್ತಾನೆ. ಅದೇ ಪ್ರಕಾರ ಕಾಡಿನಲ್ಲೂ ಹರಿ(ಸಿಂಹ)ಗಳಿರುತ್ತವೆ. ಕೈಲಾಸದಲ್ಲಿ ಶಿವ(ಈಶ್ವರ)ನಿರುತ್ತಾನೆ. ಆ ಕಾಡಿನಲ್ಲಿಯೂ ಶಿವ(ಮುಳ್ಳು)ಗಳಿದ್ದವು.
ಯುದ್ಧದಲ್ಲಿ ಶರ(ಬಾಣ)ಗಳು ಇರುತ್ತವೆ. ಅಂತೆಯೇ ಇಲ್ಲಿಯೂ ಶರ (ಹುಲ್ಲು) ಇದ್ದವು. ಕೊಳದಲ್ಲಿ ಪುಂಡರೀಕ(ಕಮಲ) ಗಳು ಕಾಣುತ್ತವೆ. ಹಾಗೆಯೇ ಇಲ್ಲಿಯೂ ಪುಂಡರೀಕ(ಹುಲಿ)ಗಳು ಕಾಣುತ್ತಿದ್ದವು. ಕಡಲಿನಲ್ಲಿ ವಿದ್ರುಮ(ಹವಳ)ಗಳು ಇರುತ್ತವೆ. ಅದರಂತೆಯೇ ಕಾಡಿನಲ್ಲಿ ವಿದ್ರುಮ(ಮರ)ಗಳಿರುತ್ತವೆ. ಆಕಾಶದಲ್ಲಿ ಋಕ್ಷ(ನಕ್ಷತ್ರಗಳಿರುತ್ತವೆ. ಅಂತೆಯೇ ಈ ಕಾಡಿನಲ್ಲಿ ಋಕ್ಷಕರಡಿಗಳು) ಗಳಿವೆ. ಇಂತಹ ಮಹಾ ಅಟವಿಯು ಜಾನಕಿಯ ಕಣ್ಣಿಗೆ ಘೋರತರವಾಗಿ ಕಂಡಿತು.
ಶಬ್ದಾರ್ಥ: ಮಖ-ಯಜ್ಞ ದಿವ-ಸ್ವರ್ಗ; ಪಯೋನಿಧಿ-ಹಾಲ್ಗಡಲು; ನಿರುತ-ನಿರಂತರ, ಸತತ; ಸೋಮ-ಸೋಮಲತೆ, ಚಂದ್ರ: ಅರ್ಕ-ಸೂರ್ಯ, ಎಕ್ಕೆಗಿಡ; ಶಿಖಿ-ಅಗ್ನಿ, ನವಿಲು; ಸಹಸ್ರಾಕ್ಷ-ಇಂದ್ರ, ನವಿಲು; ಹರಿ-ವಿಷ್ಣು, ಸಿಂಹ.ಶಿವಶಂಕರ, ಮುಳ್ಳು; ಧುರ-ಯುದ್ಧ: ನಭ-ಆಕಾಶ, ಶರ-ಹುಲ್ಲು, ಬಾಣ; ಪುಂಡರೀಕ-ಹುಲಿ, ಕಮಲ; ವಿದ್ರುಮ-ಮರ, ಹವಳ;ಋಕ್ಷ-ಕರಡಿ, ನಕ್ಷತ್ರ.
೪) ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗೆ
ಳಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಗ
ಅಲ್ಲಿ ಸುಹವಿಗಳ ಕಂಪೊಗೆದ ಪೊಗದಳದಗ್ನಿಹೋತ್ರದ ಕುಟೀರಂಗಳು
ಎಲ್ಲಿ ಪರಿಚಿತವಾದ ವೇದಶಾಸ್ತಧ್ವನಿಗ
ಇಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ
ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು
ಸೀತೆಯು ಶ್ರೀರಾಮನು ತನ್ನ ಬಯಕೆಯಂತೆ ಋಷಿಮುನಿಗಳ ಆಶ್ರಮದ ಸಂದರ್ಶನಕ್ಕಾಗಿ ಕಳಿಸಿರುವನೆಂದೇ ಬಗೆದಿದ್ದಳು. ಆದರೆ ಲಕ್ಷಣನು ತನ್ನನ್ನು ಮಹಾ ಘೋರಾರಣ್ಯಕ್ಕೆ ಕರೆತಂದುದನ್ನು ನೋಡಿ ಭಯವಾಗತೊಡಗಿತು. ಆಕೆ ಲಕ್ಷಣನನ್ನು ಈ ಮುಂದಿನಂತೆ ಪ್ರಶ್ನಿಸಿದಳು. “ಎಲೈ ಲಕ್ಷಣನೇ, ಇಲ್ಲೆಲ್ಲೂ ಪರಮ ಪವಿತ್ರವಾದ ಮುನಿಶ್ರೇಷ್ಠರ ಆಶ್ರಮಗಳು ಕಣ್ಣಿಗೆ ಕಾಣಿಸುತ್ತಿಲ್ಲವಲ್ಲಾ? ಸಿದ್ದಿ ಸಾಧಕ ಯೋಗಿಗಳ ಆಶ್ರಮಗಳಲ್ಲಿವೆ? ಮಂಗಳಕರವೆನಿಸುವ ಸ್ಥಳಗಳಲ್ಲಿ? ಆಶ್ರಮಗಳಲ್ಲಿ ನಿರಂತರ ವಾಗಿ ನಡೆಯುವ ಮಹಾಯಾಗಗಳಿಂದ ಹೊರಹೊಮ್ಮುತ್ತಿರುವ ಹವಿಸ್ಸಿನ ಪರಿಮಳ ಕಾಣದಲ್ಲಾ? ಹೋಮ-ಧ್ಯಮಗಳಿಲ್ಲ, ಅಗ್ನಿ ಹೋತ್ರದ ಗುಡಿಸಲುಗಳು ಕಾಣುತ್ತಿಲ್ಲ. ಅಲ್ಲಿಂದ ಹೊರಹೊಮ್ಮುವ ವೇದಘೋಷಗಳೂ ಕಿವಿಯ ಮೇಲೆ ಬೀಳುತ್ತಿಲ್ಲ! ಇವೆಲ್ಲವೂ ಇರುವ ಸ್ಥಳಕ್ಕೆ ನನ್ನನ್ನು ಕರೆದೊಯ್ಯದೆ, ಘನಘೋರವಾದ ಈ ಕಾಡಿಗೆ ನನ್ನನ್ನು ಏಕೆ ಕರೆತಂದಿರುವೆ?” ಎಂದು ಭಯದಿಂದ, ನಿಟ್ಟುಸಿರು ಬಿಡುತ್ತಾ ಸೀತೆಯು ಲಕ್ಷಣನನ್ನು ಕೇಳಿದಳು.
ಶಬ್ದಾರ್ಥ: ಸುಹವಿ-ಹವಿಸ್ಸು; ದಾರುದಾರುಣದ-ಅತಿಭಯಂಕರವಾದ; ಅಗ್ನಿಹೋತ್ರ-ಯಜ್ಞಕುಂಡ.
೫) ನರನಾಥ ಕೇಳವನಿಸುತೆ ನುಡಿದ ಮಾತಿಗು
ತ್ತರವನಾಡದೆ ಮನದೊಳುರ ನೊಂದು ರಾಘವೇ
ಶ್ವರನೆಂದ ಕಷ್ಟಮಂ ಪೇಳಪೆನೊ ಮೇಣುಸಿರದಿರ್ದಪೆನೊ ನಿಷ್ಟುರದೊಳು
ತರಣಿಕುಲಸಾರ್ವಭೌಮನ ರಾಣಿಯಂ ಬನದೊ
ಳಿರಿಸಿ ಪೋದಹೆನೆಂತೂ ಪೋಗದಿರ್ದೊಡೆ ಸಹೋ
ದರನದೇನೆಂದಪನೊ ಹಾಯೆಂದು ಲಕ್ಷಣಂ ಬೆಂದು ಬೇಗುದಿಗೊಂಡನು
ವೈಶಂಪಾಯನ ಮಹರ್ಷಿಗಳು ಜನಮೇಜಯ ಮಹಾರಾಜನಿಗೆ ‘ಸೀತಾ ಪರಿತ್ಯಾಗ’ದ ಕಥೆಯನ್ನು ಮುಂದುವರೆಸುತ್ತಾ ಹೀಗೆಂದು ನುಡಿದರು; ಎಲೈ ರಾಜನೇ ಕೇಳು, ಸೀತೆಯು ತನ್ನನ್ನು ಘೋರಾರಣ್ಯಕ್ಕೆ ಕರೆತಂದುದೇಕೆಂದು ಲಕ್ಷ್ಮಣನನ್ನು ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸದ ಲಕ್ಷ್ಮಣನ ಮನಸ್ಸಿಗೆ ಅಪಾರವಾದ ನೋವುಂಟಾಯಿತು. ರಘುರಾಮನು ಆಡಿರುವ ಅತಿ ಕಷ್ಟಕರವಾದ ಮಾತುಗಳನ್ನು ಸೀತೆಗೆ ಹೇಗೆ ತಿಳಿಸುವುದೆಂದು ಅವನು ಮನದಲ್ಲೇ ದುಃಖಿಸಿದನು. ಸೂರವಂಶದಲ್ಲಿ ಜನಿಸಿರುವ ಶ್ರೀರಾಮನ ಮಹಾರಾಣಿಯಾದ ಸೀತೆಯನ್ನು ಒಬ್ಬಂಟಿಯಾಗಿ ಕಾಡಿನಲ್ಲಿ ಬಿಟ್ಟು ಹೇಗೆ ಹಿಂದಿರುಗುವುದೆಂಬ ಚಿಂತೆ ಅವನನ್ನು ಆವರಿಸಿತ್ತು. ಇದರ ಜೊತೆಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗದಿದ್ದರೆ ಶ್ರೀರಾಮನು ಏನೆನ್ನುವನೋ? ಎಂಬ ಚಿಂತೆ ಮತ್ತೊಂದು ಕಡೆ. ಈ ಎರಡೂ ಕೆಲಸಗಳೂ ಲಕ್ಷ್ಮಣನಿಗೆ ಕಡುಕಷ್ಟದವಾಗಿ ಕಂಡು ದೀರ್ಘವಾಗಿ ನಿಟ್ಟುಸಿರನ್ನು ಬಿಟ್ಟನೇ ಹೊರತು, ಅವನು ಸೀತೆಯ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ.
ಶಬ್ದಾರ್ಥ: ಉರೆ-ಬಹಳ; ತರಣಿ-ಸೂರ್ಯ; ಬೇಗುದಿ-ಸಂತಾಪ.
೬) ದೇವಿ ನಿನಗಿನ್ನೆಗಂ ಪೇಳ್ವುದಿಲ್ಲಪವಾದ
ಮಾವರಿಸೆ ನಿನ್ನನೊಲ್ಲದೆ ರಘುಕುಲೋದ್ಭವ
ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ
ಆ ವಿಭುವಿನಾಜ್ಞೆಯಂ ಮೀರಲರಿಯದೆ ಮೆಲ್ಲ
ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯಯ್ಯ
ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು
ಕೊನೆಗೂ ಲಕ್ಷಣನು ಸೀತೆಗೆ, ಅವಳನ್ನು ಕಾಡಿಗೆ ಕರೆತಂದುದರ ಕಾರಣವನ್ನು ಕಷ್ಟದಿಂದ ಹೇಳುವನು. ಅವನು “ಸೀತಾದೇವಿಯೇ, ನಿನ್ನನ್ನು ಕಾಡಿಗೆ ಕರೆತಂದುದೇಕೆಂದು ಇದುವರೆಗೂ ನಾನು ಹೇಳಲಿಲ್ಲ. ರಾಮನ ಮೇಲೆ ಒಂದು ಅಪವಾದ ಬಂದೆರಗಿದ ಕಾರಣದಿಂದ ಶ್ರೀರಾಮನು ನಿನ್ನನ್ನು ಪರಿತ್ಯಾಗ ಮಾಡಲು (ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಆದ್ದರಿಂದಲೇ ಅವನು ನಿನ್ನನ್ನು ಈ ಕಾಡಿನಲ್ಲಿ ಬಿಟ್ಟುಬರಲು ನನಗೆ ಆಜ್ಞೆ ಮಾಡಿದ್ದಾನೆ. ನಾನು ಶ್ರೀರಾಮಪ್ರಭುವಿನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ಮಹಾರಣ್ಯಕ್ಕೆ ಕರೆತಂದಿದ್ದೇನೆ. ಇನ್ನು ಇಲ್ಲಿಂದ ನೀನು ಎಲ್ಲಿಗಾದರೂ ತೆರಳಬಹುದು’ ಎಂದು ನುಡಿದ ಲಕ್ಷಣನು ಕಣ್ಣುಂಬಿಕೊಂಡು ದುಃಖಭರಿತನಾಗಿ ನಿಂತನು.
ಶಬ್ದಾರ್ಥ: ಸೀವರಿಸು-ಸಹಿಸಲಾರದೆ ವಿಭು-ರಾಜ; ವಿಪಿನ-ಕಾಡು; ಒಯ್ಯಯ್ಯನೆ- ಮೆಲ್ಲಮೆಲ್ಲನೆ.
೭) ಬಿರುಗಾಳಿ ಪೊಡೆಯ ಕಂಪಿಸಿ ಫಲಿತ ಕದಳಿ
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ದೆರೆಗೆ ಬೀಳದ ಮುನ್ನ ಹಮ್ಮಿಸಿ ಬಿದ್ದಳಂಗನೆ ಧರೆಗೆ ನಡುನಡುಗುತ
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ
ಮರುಗಿ ತಣ್ಣೀರ್ದಳೆದು ಪತ್ರದಿಂ ಕೊಡೆವಿಡಿದು
ಸೆರಗಿಂದ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು
ಲಕ್ಷಣನು ಹೇಳಿದ ಮಾತುಗಳನ್ನು ಕೇಳಿದಾಕ್ಷಣ ಸೀತೆಗಾದ ಆಘಾತವನ್ನು ಕವಿ ಈ ಪದ್ಯದಲ್ಲಿ ವಿವರಿಸಿದ್ದಾನೆ. ಶ್ರೀರಾಮನು ತನ್ನನ್ನು ತ್ಯಜಿಸಿರುವನೆಂದು ಲಕ್ಷಣನು ಹೇಳಿದಾಕ್ಷಣ ಸೀತೆಗೆ ಸಹಿಸಲಸಾಧ್ಯವಾದ ದುಃಖವಾಯಿತು. ಭೀಕರ ಬಿರುಗಾಳಿ ಬೀಸಿದಾಗ ಗೊನೆಬಿಟ್ಟ ಬಾಳೆಯ ಗಿಡ ಕಂಪಿಸಿ, ಧಡಾರನೆ ನೆಲಕ್ಕುರುಳಿ ಬೀಳುವುದೋ ಹಾಗೆ ಸೀತೆಯು ಕುಸಿದು ಬಿದ್ದಳಂತೆ. ಮೂರ್ಛ ತಪ್ಪಿ ಬಿದ್ದ ಸೀತೆಗಾಗಿ ಮರುಗುತ್ತಾ, ಕಣ್ಣೀರು ಸುರಿಸುತ್ತಾ ಲಕ್ಷಣನು ಕಾಡಿನಲ್ಲಿದ್ದ ದೊಡ್ಡದೊಂದು ಎಲೆಯನ್ನು ತಂದು, ಕೊಡೆಯಂತೆ ಹಿಡಿದು ನೆರಳನ್ನು ಒದಗಿಸಿದನು. ತಾನು ಹೊದೆದಿದ್ದ ಅಂಗವಸ್ತ್ರದ ತುದಿಯಿಂದ ಗಾಳಿಯನ್ನು ಬೀಸಿದನು. ‘ರಾಮನ ಸೇವೆಯು ಈ ರೀತಿ ಸಂದಿತೆ?’ ಎಂದು ದುಃಖಿಸಿದನು.
ಶಬ್ದಾರ್ಥ: ಫಲಿತ ಕದಳಿ-ಗೊನೆಯಿರುವ ಬಾಳೆಗಿಡ; ಹಮ್ಮಿಸು-ಪ್ರಜ್ಞೆತಪ್ಪು.
೮) ಬಿಟ್ಟನೆ ರಘದ್ವಹಂ ನನ್ನನಕಟಕಟ ತಾ
ಮುಟ್ಟನೆ ನೆಗಳ ಬಾಳೆಗೆ ಸಂಚಕಾರಮಂ
ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ಳಳುಹಿಬಾಯೆಂದು ನಿನಗೆ
ಕೊಟ್ಟನೆ ನಿರೂಪಮಂ ತಾನೆನ್ನ ಕಟ್ಟೆ
ಗೆಟ್ಟನೆ ಮನೋವಲ್ಲಭನನಗಲ್ಲಡವಿಯೊಟ್ಟನೆ
ಪಿಶಾಚದವೊಲೆಂತಿಹೆನೋ ಕೆಟ್ಟೆನಲ್ಲಾಯೆಂದೂರಲ್ಲಳಬಲೆ
ಈ ಪದ್ಯದಲ್ಲಿ ಮೂರ್ಛಯಿಂದ ಎದ್ದ ಸೀತೆಯು ರೋದಿಸಿದ ಬಗೆಯನ್ನು ಕವಿ ಚಿತ್ರಿಸಿದ್ದಾನೆ. ಸೀತೆಯು “ರಘುರಾಮನು ನನ್ನನ್ನು ಬಿಟ್ಟುಬಿಟ್ಟನೇ? ಅಯ್ಯೋ ಇನ್ನಾತ ನನ್ನನ್ನು ಮುಟ್ಟುವುದಿಲ್ಲವೇ? ಇದುವರೆಗೆ ನಮ್ಮಿಬ್ಬರ ಸಂಬಂಧ ಪ್ರಸಿದ್ಧವಾಗಿತ್ತು. ಅದಕ್ಕೆ ಶ್ರೀರಾಮನು ಸಂಚಕಾರವನ್ನು ತಂದನೆ? ಎಲೈ ಲಕ್ಷಣನೇ, ಈ ಭೀಕರವಾದ ಕಾಡಿನಲ್ಲಿ ಬಿಟ್ಟು ಬಾ ಎಂದು ಶ್ರೀರಾಮನು ನಿನಗೆ ಆದೇಶಿಸಿದನೇ? ಅಯ್ಯೋ ಅವನ ಕಣ್ಣು ಕುರುಡಾಯಿತೇನು? ಮನೋವಲ್ಲಭನನ್ನು ಅಗಲಿ ಈ ಕಾಡಿನಲ್ಲಿ ಪಿಶಾಚಿಯಂತೆ ಒಬ್ಬಳ ಹೇಗಿರಲಿ? ಅಯ್ಯೋ ನಾನು ಕೆಟ್ಟೆನಲ್ಲಾ” ಎಂದು ಅತಿಯಾದ ದುಃಖದಿಂದ ಮರುಗಿದಳೆಂದು ಕವಿಯು ಸೀತೆಯ ದುಃಖವನ್ನು ವರ್ಣಿಸಿದ್ದಾನೆ.
ಶಬ್ದಾರ್ಥ: ರಘುದ್ವಹಂ-ರಘುವಂಶ ಶ್ರೇಷ್ಠ; ನೆಗಳ-ಶ್ರೇಷ್ಠವಾದ; ನಿರೂಪ-ಆಜ್ಞೆ: ಕಟ್ಟೆ-ಮುಂದಿನ ದಾರಿ.
೯) ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ
ಬಂದು ಹರಧನುವ ಮುರಿದೆನ್ನಂ ಮದುವೆಯಾದ
ನಂದುಮೊದಲಾಗಿ ರಮಿಸಿದನೆನ್ನೊಳಾನಗಲ್ಗೊಡೆ ತಾಂ ನವೆದನಲ್ಲದೆ
ವೊಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ
ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ
ಕೊಂದಗ್ನಿಮುಖದೊಳ್ಳರೀಕ್ಷಿಸಿದನೆನ್ನೊಳಪರಾಧಮಂ ಕಾಣಿಸಿದನ
ಸೀತೆಯು ಶ್ರೀರಾಮನೊಡನೆ ಮದುವೆಯಾದ ಬಳಿಕ ತಾನು ಅನುಭವಿಸಿದ ಸುಖದುಃಖಗಳನ್ನು ಈ ಮೇಲಿನ ಪದ್ಯದಲ್ಲಿ ಸ್ಮರಿಸಿಕೊಳ್ಳುವಳು. ತನ್ನನ್ನು ಎಂತಹ ಸಂದರ್ಭದಲ್ಲಿಯೂ ತುಂಬಾ ಪ್ರೀತಿಯಿಂದ ನೋಡಿಕೊಂಡಿರುವ ಶ್ರೀರಾಮನು ಹೀಗೇಕೆ ಕಠಿಣವಾಗಿ ವರ್ತಿಸಿದನೆಂಬ ಆಶ್ಚರ್ಯ ಅವಳಿಗೆ.
ಅಂದು ಶ್ರೀರಾಮನು ಕೌಶಿಕ ಮುನಿಗಳೊಡನೆ ಮಿಥಿಲಾಪುರಕ್ಕೆ ಬಂದು ಜನಕರಾಜನಿಟ್ಟಿದ್ದ ಪಣದಲ್ಲಿ ಗೆದ್ದನು. ಶಿವಧನಸ್ಸನ್ನು ಮುರಿದು ಶೌರ್ಯವನ್ನು ತೋರಿ, ಸೀತೆಯಾದ ತನ್ನನ್ನು ವರಿಸಿದನು. ಅಂದಿನಿಂದಲೂ ಸೀತೆಯೊಡನೆ ಶ್ರೀರಾಮನು ಆನಂದದ ಕ್ಷಣಗಳನ್ನೇ ಕಳೆದಿರುವನು. ರಾವಣನು ಸೀತೆಯನ್ನು
ಅಪಹರಿಸಿದಾಗಲೂ, ಸೀತೆಯ ಅಗಲುವಿಕೆಯಿಂದ ದುಃಖಿತಗೊಂಡ ಶ್ರೀರಾಮನು ಸೀತೆಯನ್ನು ಹಿಂಪಡೆಯಲು ವಾನರ ಸೈನ್ಯವನ್ನು ಕಟ್ಟಿಕೊಂಡು, ಲಂಕೆಗೆ ಸಮುದ್ರ ಸೇತುವೆಯನ್ನು ನಿರ್ಮಿಸಿ, ರಾವಣಾದಿ ದೈತ್ಯರನ್ನು ಕೊಂದು, ಸೀತೆಯನ್ನು ಕಾಪಾಡಿದನು. ಆನಂತರ ಅಗ್ನಿಪರೀಕ್ಷೆಗೆ ಒಡ್ಡಿ ತನ್ನ ಹೆಂಡತಿ ಪರಿಶುದ್ಧ ಳೆಂಬುದನ್ನು ಖಚಿತಪಡಿಸಿಕೊಂಡನು. ಇಷ್ಟೆಲ್ಲಾ ಮುಗಿದು, ಇದೀಗ ಶ್ರೀರಾಮನಿಗೆ ತನ್ನಲ್ಲಿ ಅದಾವ ದೋಷ ಕಾಣಿಸಿತೆಂದು ಸೀ ತೆಯು ಲಕ್ಷಣನನ್ನು ಕೇಳಿದಳು. ಅವಳಿಗೆ ಅಚ್ಚರಿಗಿಂತ ಹೆಚ್ಚಾಗಿ ವಿಪರೀತ ದುಃಖವಾಯಿತು.
ಶಬ್ದಾರ್ಥ: ಕೌಶಿಕ-ವಿಶ್ವಾಮಿತ್ರ
೧೦) ಏಕೆ ನಿಂದಹೆ ಪೋಗು ಸೌಮಿತ್ರಿ ಕೋಪಿಸನೆ
ಕಾಕುತ್ಸನಿಲ್ಲಿ ತಳುವಿದೊಡೆ ನೆರವುಂಟು ತನ
ಗೀ ಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು
ಲೋಕದರಸೇಗೈದೊಡಂ ತನ್ನ ಕಿಂಕರ
‘ರ್ಬೆಕುಬೇಡೆಂದು ಪೇಳರೆ ಭರತ ಶತ್ರುಘ್ನ
ರೀ ಕೆಲಸಕೊಟ್ಟಿದರೆ ಹನುಮಂತನಿರ್ದಪನೆ ಪೇಳೆಂದಳಳಬಲೆ
ಸೀತೆಯು ಲಕ್ಷಣವನ್ನು ಅಯೋಧ್ಯೆಗೆ ಹಿಂದಿರುಗುವಂತೆ ಸೂಚಿಸುವ ಸಂಗತಿ ಈ ಪದ್ಯದಲ್ಲಿದೆ. ಸೀತಾದೇವಿಯು ಮಹಾಸಾದ್ವಿಯೂ, ಪತಿಭಕ್ತಿಯುಳ್ಳವಳೂ ಆಗಿದ್ದಳು. ತಾನು ಕಾಡುಪಾಲಾದೆನೆಂದು ತಿಳಿದ ನಂತರವೂ ಅವಳಿಗೆ ಶ್ರೀರಾಮನದೇ ಚಿಂತೆ! ಶ್ರೀರಾಮನಾಜ್ಞೆಗೆ ಬದ್ಧಳಾಗಿರಬೇಕೆಂದು ಅವಳ ಇಂಗಿತವಾಗಿತ್ತು. ಆದ್ದರಿಂದ ಅವಳು ಲಕ್ಷಣನನ್ನು ಉದ್ದೇಶಿಸಿ ಹೀಗೆ ನುಡಿದಳು: “ಎಲೈ ಲಕ್ಷಣನೇ (ಸೌಮಿತ್ರಿ), ರಾಮನ ಆಣತಿಯಂತೆ ನೀನು ನನ್ನನ್ನು ಕಾಡಿನಲ್ಲಿ ಬಿಟ್ಟುದಾಯಿತಲ್ಲವೆ? ಇನ್ನೂ ಸುಮ್ಮನೆ ಏಕೆ ನಿಂತಿರುವೆ? ನೀನು ಅಯೋಧ್ಯೆಗೆ ಹಿಂದಿರುಗುವುದು ತಡವಾದರೆ ಶ್ರೀರಾಮನು ನಿನ್ನ ಮೇಲೆ ಕೋಪಿಸಿಕೊಳ್ಳ ಬಹುದಲ್ಲವೇ? ನಾನು ಇಲ್ಲಿ ಒಂಟಿಯೆಂಬ ಭಯಬೇಡ, ನನಗಿಲ್ಲಿ ಈ ಕಾಡಿನ ಪಶು, ಪಕ್ಷಿ, ಕ್ರೂರಮೃಗಗಳು ಜೊತೆ ನೀಡುತ್ತವೆ.
ಪಾಪ ಶ್ರೀರಾಮನು ಅಯೋಧ್ಯೆಯಲ್ಲಿ ಒಂಟಿಯಾಗಿರಬಹುದು. ಲೋಕದಲ್ಲಿ ರಾಜನಾದವನು ಏನು ಮಾಡಿದರೂ ಅವನ ಅಧೀನರಾದ ಸೇವಕರು ಅದನ್ನು ಸರಿ ತಪ್ಪೆಂದು ಪ್ರಶ್ನಿಸುವುದಿಲ್ಲ. ನನ್ನನ್ನು ಕಾಡಿಗೆ ತಂದು ಬಿಡಲು ಭರತ ಹಾಗೂ ಶತ್ರುಘ್ನರು ಒಪ್ಪಿಕೊಂಡರೆ? ಹನುಮಂತನಾದರೂ ಈಗ ಇರುವನೆ ರಾಮನೊಂದಿಗೆ? ಎಂದು ಸೀತೆ ದುಃಖ ಹಾಗೂ ವ್ಯಂಗ್ಯದಿಂದ ನುಡಿದಳು. ಶಬ್ದಾರ್ಥ: ಕಾಕುತ್ನ-ರಾಮ, ತಳುವು-ತಡಮಾಡು.
೧೧) ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಜನಿಸಿ ತ
ನೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಿಡ ನೀನು
ನಡೆ ಪೋಗು ನಿಲ್ಲದಿನಿನಗೆ ಮಾರ್ಗದೊಳಾಗ
ಲಡಿಗಡಿಗೆ ಸುಖವೆಂದು ಸೀತೆ ಕಂಬನಿಗಳಂ
ಮಿಡಿದಾರ್ತೆಯಾಗಿರಿಮಿತ್ರಿ ನುಡಿದನಾ ವಿಪಿನದಭಿಮಾನಿಗಳ
ಸೀತೆಯು ಹೆಣ್ಣಾಗಿ ಹುಟ್ಟಿದ ಪಾಪಕ್ಕೆ ನಾನೀ ಅವಸ್ಥೆಯನ್ನು ಅನುಭವಿಸಬೇಕೆಂದು ತೀರ್ಮಾನಿಸಿದಳು. ಅವಳು ರಾಮನಾಜ್ಞೆಗೆ ಬದ್ಧಳಾಗಿ ಕಾಡಿನಲ್ಲಿರಲು ಅಸಹನೀಯವಾದ ದುಃಖದಲ್ಲೇ ತೀರ್ಮಾನಿಸುವಳು. ಕೊನೆಗೆ ಆಕೆ ಲಕ್ಷ್ಮಣನ ಬಳಿ, “ಕರುಣಾಳುವಾದ ರಾಘವನದೇನೂ ತಪ್ಪಿಲ್ಲ. ಮಾಡಬಾರದ ಪಾಪಗಳನ್ನು ಮಾಡಿ ಹೆಣ್ಣಾಗಿ ಹುಟ್ಟಿದ ಪಾಪವೇ ತನ್ನನ್ನು ಹೀಗೆ ತಿನ್ನುತ್ತಿದೆ. ನಾನು ಈ ದೇಹವನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಬೇಕಿದೆ.
ನಾನು ಹೇಗೋ ಕಾಡಿನಲ್ಲಿ ಬದುಕುತ್ತೇನೆ. ತಡಮಾಡದೆ ಲಕ್ಷಣನು ಅಯೋಧ್ಯೆಗೆ ಹಿಂದಿರುಗಬೇಕು” ಎಂದು ಹೇಳಿದಳು. ಅವಳು ಲಕ್ಷಣನಿಗೆ ತಕ್ಷಣವೇ ಅಲ್ಲಿಂದ ಹೊರಡಲು ಆಜ್ಞೆ ಮಾಡಿ, ದಾರಿ ಯಲ್ಲಿ ಅವನಿಗೆ ಹೆಜ್ಜೆ ಹೆಜ್ಜೆಗೂ ಸುಖವಾಗಲೆಂದು ಕಣ್ಣೀರುಗರೆಯುತ್ತಾ ಹಾರೈಸಿದಳು. ಸೀತೆಯಾಡಿದ ಮಾತುಗಳನ್ನು ಕೇಳಿದ ನಂತರ ಲಕ್ಷಣನು, ಸೀತೆಗೆ ಕಾಡಿನಲ್ಲಿ ಯಾವ ಅಪಾಯಗಳು ಎದಿರಾಗದಿರಲೆಂದು ವನದೇವತೆಗಳನ್ನು ಬೇಡಿಕೊಂಡನು.
ಶಬ್ದಾರ್ಥ: ಪಾತಕ-ಪಾಪ; ಆರ್ತೆ-ದುಃಖಿತೆ.
೧೨) ಎಲೆ ವನಸ್ಥಳಗಳಿರ ವೃಕ್ಷಂಗಳಿರ ಮೃಗಂ
ಗಳಿರ ಕ್ರಿಮಿಕೀಟುಗಳಿರ ಪಕ್ಷಿಗಳಿರ ಲತ
ಗಳಿರ ತೃಣಗುಲ್ಬಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು
ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ
ಸಲಹಿಕೊಂಬುದು ತನ್ನ ಮಾತೆಯಂ ಜಾನಕಿಯ
ನೆಲೆ ತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌಮಿತ್ರಿ ಕೈಮುಗಿದನು
ಶ್ರೀರಾಮನ ಆದೇಶದಂತೆ ಲಕ್ಷಣನು ಸೀತೆಯನ್ನು ಕಾಡಿನಲ್ಲಿಯೇ ಬಿಟ್ಟು ತಾನೊಬ್ಬನೇ ಅಯೋಧ್ಯೆಗೆ ತೆರಳುವ ಸಂದರ್ಭ ದಲ್ಲಿ ಸೀತೆಯ ಕ್ಷೇಮಕ್ಕಾಗಿ ಕಾಡಿನಲ್ಲಿರುವ ಅವ್ಯಕ್ತ ದೇವತೆಗಳನ್ನು ಪ್ರಾರ್ಥಿಸುವ ಸಂದರ್ಭವನ್ನು ಈ ಮೇಲಿನ ಪದ್ಯವು ಚಿತ್ರಿಸಿದೆ.
ಲಕ್ಷಣನು “ಎಲೈ, ಕಾಡಿನಲ್ಲಿರುವ ವನದೇವತೆಗಳೇ, ಮರಗಳೇ, ಪ್ರಾಣಿಗಳೇ, ಪಕ್ಷಿಗಳೇ, ಕ್ರಿಮಿಕೀಟಗಳೇ, ಧರ್ಮ ದೇವತೆಯೇ, ಜಗತ್ತನ್ನು ಕಾಪಾಡುವ ದೇವಗಂಗೆಯೇ, ಪಂಚಭೂತಗಳೇ ಜಾನಕಿಯ ತಾಯಿಯಾದಂತಹ ಭೂದೇವಿಯೇ, ನೀವೆಲ್ಲರೂ ಜಾನಕಿಯನ್ನು ನಿಮ್ಮ ಮಗಳಂತೆ ಸಲಹಿರಿ. ಕಾಡಿನಲ್ಲಿ ಆಕೆಗೆ ಯಾವ ಅಪಾಯವೂ ಆಗದಂತೆ ನೋಡಿಕೊಳ್ಳಿರಿ” ಎಂದು ಕೈ ಮುಗಿದು ಬೇಡಿಕೊಂಡನು.
ಶಬ್ದಾರ್ಥ: ತೃಣ-ಹುಲ್ಲು: ಗುಲ್ಮ-ಪೊದೆ.
೧೩) ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗ
ರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ
ಲ್ಲಿರದೆ ಕಂಬನಿಗರೆದು ನಿಜವೈರಮಂ ಮರೆದು ಪುವುಗಳನೆ ತೊರೆದು
ಕೊರಗುತಿರ್ದುವು ಕೂಡ ವೃಕ್ಷಲತೆಗಳ್ಳಾಡಿ
ಸೊರಗುತಿರ್ದುವು ಶೋಕಭಾರದಿಂ ಕಲ್ಲುಗಳುಂ
ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ
ವೈಶಂಪಾಯನ ಮುನಿಗಳು ಜನಮೇಜಯ ರಾಜನಿಗೆ ಕಥೆ ಹೇಳುವುದನ್ನು ಮುಂದುವರೆಸುವರು. “ಎಲೈ ರಾಜನೆ ಕೇಳು, ಸೀತೆಗೆ ಒದಗಿದ ಸಂಕಟದ ಸ್ಥಿತಿಯನ್ನು ನೋಡಿ ಆ ಕಾಡಿನಲ್ಲಿದ್ದ ಪಕ್ಷಿಗಳು, ಮೃಗಗಳು, ಜಂತುಗಳೆಲ್ಲವೂ ಬಂದು ಸೀತೆಯ ಸುತ್ತ ನಿಂತವು. ಅವುಗಳೆಲ್ಲ ಆಕೆಯ ದುಃಖದಲ್ಲಿ ಭಾಗಿಗಳಾಗಿ ಕಣ್ಣೀರು ಸುರಿಸಿದವು. ತಮ್ಮೊಳಗಿನ ಪರಸ್ಪರ ವೈರತ್ವವನ್ನು ಮರೆತವು.
ಅವುಗಳೆಲ್ಲವೂ ಹುಲ್ಲು, ಆಹಾರ, ಮೇವುಗಳನ್ನು ತೊರೆದು ಸೀತೆಗಾಗಿ ಕೊರಗಿ, ಗೋಳಾಡಿದವು. ಅಲ್ಲಿದ್ದ ಮರ, ಬಳ್ಳಿಗಳೆಲ್ಲಾ ಬಾಡಿ ಸೊರಗಿಹೋದುವಂತೆ, ಅತಿಯಾದ ಶೋಕದಿಂದ ಕಲ್ಲುಗಳೂ ಕೂಡ ಕರಗಿದವು. ಈ ರೀತಿಯಲ್ಲಿ ಸೀತೆ ದುಃಖದಲ್ಲಿ ಭಾಗಿಯಾದ ಮೃಗ, ಪಕ್ಷಿ, ಜಂತು, ತರುಲತೆಗಳನ್ನು ನೋಡಿ ಕವಿಯು “ಜಗತ್ತಿನಲ್ಲಿ ಉತ್ತಮರಿಗಾದ ಕೆಡುಕನ್ನು ಸಹಿಸುವವರು ಯಾರೂ ಇಲ್ಲ’ ಎಂದಿದ್ದಾನೆ.
ಶಬ್ದಾರ್ಥ: ಧರಣಿಸುತ-ಸೀತೆ; ಮೈಯುಡುಗಿ-ದೇಹವನ್ನು ಕುಗ್ಗಿಸಿ; ನಿಜವೈರ- ತಮ್ಮತಮ್ಮಲ್ಲಿನ ವೈರ.
೧೪) ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು
ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸ
ಶಿಥಿಲವಾದವಯವದ ಧೂಳಿಡಿದ ಮೆಯ್ಯ ಬಿಡುಮುಡಿಯಂ ವಿಕೃತಿಯನೆಣಿಸದೆ
ಮಿಥಿಲೇಂದ್ರವಂಶದೊಳನಿಸಿ ರಘುಕುಲದ ದಶ
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್
ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ ಕಲ್ಕರಂ ಕರಗುವಂತೆ
ಪ್ರಸ್ತುತ ಪದ್ಯದಲ್ಲಿ ಸೀತೆಯು ತನಗೊದಗಿದ ದುಃಸ್ಥಿತಿಗಾಗಿ ಮರುಗಿದ ವಿವರಗಳನ್ನು ಕವಿ ಚಿತ್ರಿಸಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಚೇತರಿಸಿಕೊಂಡ ಸೀತೆಯು ತನ್ನ ಮುಂದಿನ ದಾರಿ ಯಾವುದೆಂದು ದಿಕ್ಕುದಿಕ್ಕುಗಳನ್ನೂ ನೋಡಿದಳು. ಅವಳ ದೇಹದ ಅಂಗಾಂಗಗಳೆಲ್ಲವೂ ಶಿಥಿಲಾವಸ್ಥೆಗೆ ಸಂದಿತ್ತು. ತನ್ನ ಧೂಳಿಡಿದ ದೇಹವನ್ನೂ ಬಿಚ್ಚಿ ಕೆದರಿರುವ ಕೂದಲನ್ನು ಲೆಕ್ಕಿಸದ ಸೀತೆಯು “ತಾನು ಜನಕ ಮಹಾರಾಜನ ವಂಶದಲ್ಲಿ ಮಗಳಾಗಿ ಜನಿಸಿದವಳು ಮತ್ತು ರಘುವಂಶದ ದಶರಥ ಮಹಾರಾಜನ ಸೊಸೆ ಯಾದವಳು. ಇಂತಹ ತಾನು ಈ ಭೀಕರವಾದ ಕಾಡಿನಲ್ಲಿ ತೊಳಲಾಡಬೇಕಾಯ್ತಿ! ಅಯ್ಯೋ ವಿಧಿಯೇ…” ಎಂದು ಅವಳು ಮರ ಮತ್ತು ಕಲ್ಲುಗಳೂ ಕೂಡ ಕರಗಿಬಿಡುವಂತೆ ಶೋಕಿಸಿದಳೆಂದು ಕವಿಯು ವರ್ಣಿಸಿದ್ದಾನೆ.
ಶಬ್ದಾರ್ಥ: ಪಥ-ದಾರಿ; ಹಲುಬು-ದುಃಖಿಸು.
೧೫) ಅನ್ನೆಗಂ ಮಖಕೆ ಯೂಪವನರಸುತಾ ಬನಕೆ
ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ
ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳೊರ್ವಳ ಪುಗಲ್ಲೆಸೆಗಾಣದೆ
ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತು
ವಿನ್ನವೆವ ಕಾಂತಾರದಧಿದೇವಿ ತಾನೆನಲ್
ಸನ್ನಗದ್ದದಕಂಠಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು
ಅಷ್ಟರಲ್ಲಿ ಮುನಿಶ್ರೇಷ್ಠರೆನಿಸಿದ್ದ ತಪೋಧನರಾದ ವಾಲ್ಮೀಕಿ ಮುನಿಗಳು, ತಮ್ಮ ಹಲವಾರು ಶಿಷ್ಯರೊಂದಿಗೆ ಸೀತೆಯಿದ್ದ ಕಾಡಿಗೆ ಬಂದರು. ಯಜ್ಞಪಶುವನ್ನು ಕಟ್ಟುವ ಕಂಬವನ್ನು ‘ಯೂಪ’ ಎನ್ನುವರು. ಈ ಯೂಪವನ್ನು ಹುಡುಕುತ್ತಾ ವಾಲ್ಮೀಕಿ ತನ್ನ ಶಿಷ್ಯರೊಂದಿಗೆ ಅಲ್ಲಿಗೆ ಬಂದವರು, ಕಾಡಿನಲ್ಲಿ ಒಬ್ಬಳೇ ಏಕಾಂಗಿಯಾಗಿ, ದಿಕ್ಕುಗಾಣದೆ, ದುಃಖದಿಂದ ಭ್ರಾಂತಳಾಗಿ, ಗತಿಗೆಟ್ಟು ಗ್ರೀಷ್ಮ ಋತುವಿನ ಬಿಸಿಲಲ್ಲಿ ಬಸವಳಿದು ಬಿದ್ದು ರೋದಿಸುತ್ತಿರುವ ವನದೇವತೆಯಂತೆ, ಗಂಟಲು ಬಿಗಿದು ದುಃಖಿಸುತ್ತಿರುವ ಸೀತೆಯನ್ನು ನೋಡಿದರು.
ಶಬ್ದಾರ್ಥ: ಯೂಪ-ಯಜ್ಞಪಶುವನ್ನು ಕಟ್ಟುವ ಕಂಬ, ಸನ್ನುತ-ಪ್ರಸಿದ್ಧ; ಬನ್ನ ದುಃಖ; ಬಗೆಗೆಟ್ಟು-ದಿಕ್ಕುತೋಚದೆ; ಪಾಡಳಿದು-ಅನಾಥವಾಗಿ, ನೆಲೆಗೆಟ್ಟು.
೧೬) ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ
ಭಾವಿಸದಿರಿನ್ನು ಸಂದೇಹಮಂ ಜನಕಂಗೆ.
ನಾವನ್ಯರಲ್ಲ ನಮ್ಯಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು
ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ
ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ
ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು.
ಅಳುತ್ತಿದ್ದ ಸೀತೆಯನ್ನು ಸಂತೈಸಿದ ವಾಲ್ಮೀಕಿಯು ಸೀತೆಯನ್ನು ತಮಾಶ್ರಮಕ್ಕೆ ಕರೆದೊಯ್ದ ವಿವರಗಳನ್ನು ಈ ಪದ್ಯದಲ್ಲಿ ಕಾಣಬಹುದು. ವಾಲ್ಮೀಕಿಯು ಸೀತೆಯನ್ನು ಉದ್ದೇಶಿಸಿ “ದೇವಿ, ಅಳಬೇಡ, ನಿನಗೆ ಅವಳಿ ಮಕ್ಕಳು ಜನಿಸುವರು. ನನ್ನ ಬಗ್ಗೆ ಸಂದೇಹಪಡಬೇಡ. ನಿನ್ನ ತಂದೆಯಾದ ಜನಕನಿಗೆ ನಾನು ಪರಿಚಿತ, ಅನ್ಯನಲ್ಲ. ನೀನು ನಮ್ಮ ಆಶ್ರಮಕ್ಕೆ ಬಾ. ಅಲ್ಲಿ ನಿನಗಿರುವ ಬಯಕೆಗಳನ್ನೆಲ್ಲಾ ಈಡೇರಿಸುತ್ತೇನೆ. ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇವೆ, ಹೆದರಬೇಡ’ ಎಂದು ಹೇಳಿ ಸಮಾಧಾನ ಪಡಿಸಿದನು ಮತ್ತು ಶ್ರೀರಾಮನ ಮಡದಿಯಾದ ಸೀತಾದೇವಿಯನ್ನು ವಾಲ್ಮೀಕಿಯು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋದನು. ಶಬ್ದಾರ್ಥ: ಯುಗಳ-ಅವಳಿ; ಓವು-ರಕ್ಷಿಸು; ರಾವಣಾರಿ (ರಾವಣ+ಅರಿ)-ರಾಮ.
Conclusion
As the final chapter of “Halubidal Kalmaram Karaguvante” draws to a close, we are left with a bittersweet feeling, a mixture of joy and sorrow. Through the trials and tribulations faced by the characters, we have witnessed the enduring power of love and the strength of community. The Karaguvante continues to flow, as does the spirit of Halubidal, a testament to the resilience of the human heart. As we bid farewell to this captivating story, may we carry its lessons with us, cherishing the bonds of love and tradition that connect us all.